Home ತಾಜಾ ಸುದ್ದಿ ವೇದಿಕೆಯಲ್ಲಿ ಕುಳಿತು ಬೆಳೆದವರು ಸಮಾಜ ಬೆಳೆಸಲಿಲ್ಲ…

ವೇದಿಕೆಯಲ್ಲಿ ಕುಳಿತು ಬೆಳೆದವರು ಸಮಾಜ ಬೆಳೆಸಲಿಲ್ಲ…

0

ಬೆಳಗಾವಿ: ನನ್ನ ಜೊತೆಗೆ ವೇದಿಕೆಯಲ್ಲಿ ಕುಳಿತು ಬಹಳ ಜನ ಬೆಳೆದರು. ಆದರೆ ಸಮಾಜ ಬೆಳೆಸಲಿಲ್ಲ ಎಂದು ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಶ್ರೀಗಳು ಅಸಮಾಧಾನ ಹೊರಹಾಕಿದರು.
ಮೀಸಲಾತಿಗಾಗಿ ಸರ್ಕಾರ ಮೇಲೆ ಒತ್ತಡ ತರುವ ನಿಟ್ಟಿನಲ್ಲಿ ನಗರದಲ್ಲಿ ರವಿವಾರ ಆಯೋಜಿಸಲಾಗಿದ್ದ ಲಿಂಗಾಯತ ಪಂಚಮಸಾಲಿ ವಕೀಲರ ರಾಜ್ಯ ಮಟ್ಟದ ಸಮಾವೇಶದ ಸಾನಿದ್ಯ ವಹಿಸಿ ಅವರು ಮಾತನಾಡಿದರು.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಆಡಳಿತಾವಧಿಯಲ್ಲಿಯೇ ಮೀಸಲಾತಿ ಕೊಟ್ಟಿದ್ದರೆ ಅವರಿಗೆ ಇಂಥ ಗತಿ ಬರುತ್ತಿರಲಿಲ್ಲ. ಈಗ, ಸಿದ್ದರಾಮಯ್ಯ ಅವರ ಸರ್ಕಾರ ಬರಲು ಪಂಚಮಸಾಲಿ ಹೋರಾಟ ಕಾರಣ. ಬೊಮ್ಮಾಯಿ ಅವರು ಮಾಡಿದ ತಪ್ಪಿಗೆ ಸಿದ್ದರಾಮಯ್ಯ ಬಂದಿದ್ದಾರೆಂದರು.
ಸರ್ಕಾರ ನೋಡಿ ನಾವೆಂದೂ ಹೋರಾಟ ಮಾಡುವುದಿಲ್ಲ. ನಿಮ್ಮ ರಾಜಕೀಯ ಜಗಳ ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳಿ. ಹೋರಾಟಕ್ಕೆ ಅಡ್ಡಿ ಮಾಡಬೇಡಿ ಎಂದು ಸಮಾಜದ ಮುಖಂಡರಿಗೆ ಕಿವಿಮಾತು ಹೇಳಿದ ಶ್ರೀಗಳು, ಸಮಾಜದ ಜನಪ್ರತಿನಿಧಿಗಳು ಸಾಧ್ಯವಾದರೆ ಸಿದ್ದರಾಮಯ್ಯ ಅವರ ಮನವೊಲಿಸಿ ಇಲ್ಲವೇ ಹೋರಾಟಕ್ಕೆ ಬರಬೇಕು. ಅದೂ ಆಗದಿದ್ದರೆ ಹೋರಾಟಕ್ಕೆ ಬೆಂಬಲ ನೀಡಿ ಸಮ್ಮನಿರಿ ಎಂದು ಹೇಳಿದರು.

Exit mobile version