Home ತಾಜಾ ಸುದ್ದಿ ವಿಶ್ವ ದರ್ಜೆಯ ಶಿಕ್ಷಣಕ್ಕೆ ಕರ್ನಾಟಕ ಹೆಬ್ಬಾಗಿಲು

ವಿಶ್ವ ದರ್ಜೆಯ ಶಿಕ್ಷಣಕ್ಕೆ ಕರ್ನಾಟಕ ಹೆಬ್ಬಾಗಿಲು

0

ಬೆಂಗಳೂರು: ನಗರದಲ್ಲಿ ಬ್ರಿಟನ್‌ನ ಲಿವರ್ ಪೂಲ್ ವಿವಿಯ ಮೊದಲ ಭಾರತೀಯ ಕ್ಯಾಂಪಸ್ ಆರಂಭಗೊಳ್ಳಲಿದೆ ಎಂದು ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಅತ್ಯುನ್ನತ ಶಿಕ್ಷಣ ಪಡೆಯಲು ವಿದೇಶಗಳಿಗೆ ತೆರಳಲೇಬೇಕು ಎನ್ನುವ ಕಾಲವೊಂದಿತ್ತು. ಆದರೆ ಇಂದು, ವಿಶ್ವದ ಪ್ರಖ್ಯಾತ ವಿಶ್ವವಿದ್ಯಾಲಯಗಳು ನಮ್ಮ ನಾಡಿಗೆ ಬರುವಂತಾಗಿದೆ. ಬ್ರಿಟನ್ ನ ಹೆಸರಾಂತ ಲಿವರ್ ಪೂಲ್ ವಿಶ್ವವಿದ್ಯಾಲಯ ತನ್ನ ಅಂತಾರಾಷ್ಟ್ರೀಯ ಕ್ಯಾಂಪಸ್ ಅನ್ನು ನಾವೀನ್ಯತೆಯ ಹೃದಯಭೂಮಿ ಬೆಂಗಳೂರಿನಲ್ಲಿ ಆರಂಭಿಸುತ್ತಿರುವುದು ನಾಡಿಗೆ ಹೆಮ್ಮೆಯ ಸಂಗತಿ.

ಕರ್ನಾಟಕವು ಕೈಗಾರಿಕಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವುದಷ್ಟೇ ಅಲ್ಲದೆ ವಿಶ್ವ ದರ್ಜೆಯ ಶಿಕ್ಷಣ ಮತ್ತು ನಾವೀನ್ಯತೆಗಾಗಿ ಜಾಗತಿಕ ತಾಣವಾಗಿ ವೇಗವಾಗಿ ಬೆಳೆಯುತ್ತಿದೆ. ಭಾರತೀಯ ವಿದ್ಯಾರ್ಥಿಗಳು, ವಿಶೇಷವಾಗಿ ಕರ್ನಾಟಕದವರು, ನಮ್ಮ ನೆಲದಲ್ಲಿಯೇ ವಿಶ್ವದರ್ಜೆಯ ಶಿಕ್ಷಣವನ್ನು ಪಡೆಯಲು ಸಾಧ್ಯವಾಗುತ್ತದೆ. ಐಟಿ ನಗರಿ, ಸಿಲಿಕಾನ್ ಸಿಟಿಯಾಗಿ ಪ್ರಸಿದ್ಧವಾದ ಬೆಂಗಳೂರು ಇದೀಗ ಅಂತಾರಾಷ್ಟ್ರೀಯ ಶಿಕ್ಷಣದ ಪ್ರಮುಖ ಕೇಂದ್ರವಾಗಿಯೂ ರೂಪಗೊಳ್ಳುತ್ತಿದೆ ಎಂದಿದ್ದಾರೆ.

Exit mobile version