Home ಕ್ರೀಡೆ ವಿಶ್ವ ಕರಾಟೆ ಚಾಂಪಿಯನ್ ಶಿಪ್: ಚಿನ್ನ, ಕಂಚಿನ ಪದಕ ಗೆದ್ದ ಕನ್ನಡಿಗರು

ವಿಶ್ವ ಕರಾಟೆ ಚಾಂಪಿಯನ್ ಶಿಪ್: ಚಿನ್ನ, ಕಂಚಿನ ಪದಕ ಗೆದ್ದ ಕನ್ನಡಿಗರು

0

ಬೆಂಗಳೂರು; ಜರ್ಮನಿಯ ಫ್ರಾಂಕ್‌ಫರ್ಟ್‌ನಲ್ಲಿ ನಡೆದ ಯುನೈಟೆಡ್ ವರ್ಲ್ಡ್ ಮಾರ್ಷಲ್ ಆರ್ಟ್ಸ್ ಫೆಡರೇಶನ್ ಮತ್ತು ಐಸಿಒ ವರ್ಲ್ಡ್ ಮಾರ್ಷಲ್ ಆರ್ಟ್ಸ್ ಚಾಂಪಿಯನ್‌ಶಿಪ್‌ನಲ್ಲಿ ಕನ್ನಡಿಗರು ಅಮೋಘ ಸಾಧನೆ ಮಾಡಿದೆ.
ಕಲ್ಬಾಚ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಯು.ಡಬ್ಲ್ಯು.ಎಂ.ಎ.ಎಫ್ ಮತ್ತು ಐಸಿಒ ವರ್ಲ್ಡ್ ಮಾರ್ಷಲ್ ಆರ್ಟ್ಸ್ ಚಾಂಪಿಯನ್‌ಶಿಪ್‌ನ ಕಟಾ ಸ್ಪರ್ಧೆಯಲ್ಲಿ 16-17 ವರ್ಷದ ಜೂನಿಯರ್ ವಿಭಾಗದಲ್ಲಿ ಮಾಸ್ಟರ್ ಪ್ರಣವ್ ವಿ ಎಚ್ ಚಿನ್ನದ ಪದಕ ಗೆದ್ದು ಸಾಧನೆ ಮೆರೆದ್ದಿದ್ದಾರೆ. ಬೆಂಗಳೂರಿನ ಹಿರಿಯ ತರಬೇತುದಾರರಾದ ರೆನ್ಶಿ ರಾಮನ್ ಗಣೇಶ್ ವೆಟರನ್ಸ್ ವಿಭಾಗದ ಕಟಾ ಸ್ಪರ್ಧೆಯಲ್ಲಿ (ಶ್ಯಾಡೋ ಬಾಕ್ಸಿಂಗ್) ಭಾಗವಹಿಸಿ ಕಂಚಿನ ಪದಕಕ್ಕೆ ಭಾಜನರಾಗಿದ್ದಾರೆ.
ಒಂದು ಸಾವಿರಕ್ಕೂ ಅಧಿಕ ವಿದ್ಯಾರ್ಥಿನಿಯರಿಗೆ ತರಬೇತಿ ನೀಡಿರುವ ಬೆಂಗಳೂರಿನ ರೆನ್ಶಿ ಪುಷ್ಪಾ, ಉಪ ಮುಖ್ಯ ತರಬೇತುದಾರ ಸೆನ್ಸೆ ಇ.ಎನ್. ರಮ್ಯಾ ತಂಡವು ಕ್ಯೋಶಿ ಪಿ.ಆರ್.ರಮೇಶ್ ಅವರ ಮಾರ್ಗದರ್ಶನದಲ್ಲಿ ದೇಶವನ್ನು ಪ್ರತಿನಿಧಿಸಿತ್ತು. 8ನೇ ಡಾನ್ ಬ್ಲಾಕ್ ಬೆಲ್ಟ್, ಪ್ರಧಾನ ಕಾರ್ಯದರ್ಶಿ ಎಐಕೆಎಫ್ ಮತ್ತು ಯು.ಡಬ್ಲ್ಯು.ಎಂ.ಎ.ಎಫ್ ಏಷ್ಯಾ ಮುಖ್ಯಸ್ಥ ಡಾ. ವಿಕ್ರಮ್ ಕಪೂರ್ ಭಾರತದ ತಂಡವನ್ನು ಪ್ರೋತ್ಸಾಹಿಸಿದರು.

Exit mobile version