ಟಿ20 ವಿಶ್ವಕಪ್ ನಲ್ಲಿ ಟೂರ್ನಿಯಲ್ಲಿ ಭಾರತ ಗೆದ್ದು ಬೀಗಿದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಕ್ರಿಕೆಟ್ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಭಾರತದ, ಕನ್ನಡ ಬಾವುಟ ಹಿಡಿದು ಜೈ ಕಾರ ಹಾಕಿದರು. ವಿರಾಟ ಕೊಹ್ಲಿ, ಕ್ಯಾಪ್ಟನ್ ರೋಹಿತ್ ಶರ್ಮಾ ಪರ ಘೋಷಣೆ ಕೂಗಿದರು. ವಿಶ್ವಕಪ್ ಮಾದರಿಯನ್ನು ತಂದು ಗೆಲುವಿನ ಸಂಭ್ರಮ ಆಚರಿಸಿದ್ದು ವಿಶೇಷವಾಗಿತ್ತು.
