Home ತಾಜಾ ಸುದ್ದಿ ವಾಹನ ಸವಾರರಿಗೆ ಸಿಹಿ ಸುದ್ದಿ​: HSRP ನಂಬರ್​ ಪ್ಲೇಟ್​​ ಅಳವಡಿಸುವ ಅವಧಿ ವಿಸ್ತರಣೆ

ವಾಹನ ಸವಾರರಿಗೆ ಸಿಹಿ ಸುದ್ದಿ​: HSRP ನಂಬರ್​ ಪ್ಲೇಟ್​​ ಅಳವಡಿಸುವ ಅವಧಿ ವಿಸ್ತರಣೆ

0

ಬೆಂಗಳೂರು: ವಾಹನಗಳಿಗೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ (HSRP) ಅಳವಡಿಕಿಗೆ ಮತ್ತೆ ಮೂರು ತಿಂಗಳವರೆಗೆ ವಿಸ್ತರಣೆ ಮಾಡುತ್ತೇವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಸದಸ್ಯ ಮಧು.ಜಿ ಮಾದೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಸುಪ್ರೀಂಕೋರ್ಟ್ ನಿರ್ದೇಶನದಂತೆ ರಾಜ್ಯದಲ್ಲಿ ಇದುವರೆಗೂ 18 ಲಕ್ಷ ವಾಹನಗಳಿಗೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ ಅಳವಡಿಸಲಾಗಿದೆ. ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಇದು ನಡೆಯಬೇಕಾಗಿರುವುದರಿಂದ ಮೂರು ತಿಂಗಳು ವಿಸ್ತರಣೆ ಮಾಡುತ್ತೇವೆ ಇಲಾಖೆಯ ಅಧಿಕೃತ ವೆಬ್‍ಸೈಟ್ ಬಳಸಿಕೊಂಡು ಆನ್‍ಲೈನ್ ಮೂಲಕವೇ ವಾಹನ ಸವಾರರು ನೋಂದಣಿ ಮಾಡಿಕೊಳ್ಳಬಹುದೆಂದು ಹೇಳಿದರು.

Exit mobile version