Home News ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ 2000 ಅಭ್ಯರ್ಥಿಗಳ ನೇಮಕಾತಿಗೆ ಆಗ್ರಹ

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ 2000 ಅಭ್ಯರ್ಥಿಗಳ ನೇಮಕಾತಿಗೆ ಆಗ್ರಹ

ಬೆಂಗಳೂರು: ಎಲ್ಲಾ ಅಭಿವೃದ್ಧಿ ವಿಚಾರದಲ್ಲೂ ಉತ್ತರ ಕರ್ನಾಟಕ ಭಾಗವನ್ನ ನಿರ್ಲಕ್ಷ್ಯ ಮಾಡುತ್ತಿರುವ ಕಾಂಗ್ರೆಸ್‌ ಸರ್ಕಾರ, ಸಾರಿಗೆ ಸಂಸ್ಥೆ ನೇಮಕಾತಿ ವಿಚಾರದಲ್ಲೂ ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಟೀಕಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ KSRTCಗೆ 2000, BMTC 2286,KKRTC 1619 ಅಭ್ಯರ್ಥಿಗಳ ನೇಮಕಾತಿ ಮಾಡಿದರೇ ಉತ್ತರ ಕರ್ನಾಟಕ ಭಾಗದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಕೇವಲ 1000 ಅಭ್ಯರ್ಥಿಗಳ ನೇಮಕಾತಿ ಮಾಡಿ ಅನ್ಯಾಯ ಮಾಡಿದೆ. ಈ ಹಿಂದೆ 2000 ಅಭ್ಯರ್ಥಿಗಳ ನೇಮಕಾತಿ ಆಗಲಿದೆ ಅಂತ ಆದೇಶ ಬಂದಿತ್ತು ಅದನ್ನೇ ನಂಬಿಕೊಂಡು ಪರೀಕ್ಷೆಯಲ್ಲಿ ಉತ್ತೀರ್ಣರಾದ 2000 ಸಾವಿರ ಅಭ್ಯರ್ಥಿಗಳು ನೇಮಕಾತಿಯ ಆಸೆಯಿಟ್ಟುಕೊಂಡಿದ್ದರು. ಆದ್ರೇ ಈಗ ಸಾವಿರ ಅಭ್ಯರ್ಥಿಗಳ ಜೀವನದ ಜೊತೆ ಸರ್ಕಾರ ಆಟ ಆಡುತ್ತಿದೆ. ಕೂಡಲೇ ಈ ಆದೇಶ ಹಿಂಪಡೆದು ,ಮೊದಲಿನ ಹಾಗೆ 2000 ಅಭ್ಯರ್ಥಿಗಳ ನೇಮಕಾತಿ ಮಾಡಬೇಕು ಅಂತ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಆಗ್ರಹಿಸುತ್ತೇನೆ ಎಂದಿದ್ದಾರೆ.

Exit mobile version