Home ತಾಜಾ ಸುದ್ದಿ ಲೋಕಸಭೆ ಚುನಾವಣೆ: ಟಿಎಂಸಿ ಅಭ್ಯರ್ಥಿಗಳ ಘೋಷಣೆ

ಲೋಕಸಭೆ ಚುನಾವಣೆ: ಟಿಎಂಸಿ ಅಭ್ಯರ್ಥಿಗಳ ಘೋಷಣೆ

0

ಪಶ್ಚಿಮ ಬಂಗಾಳ: ಮುಂಬರುವ ಲೋಕಸಭೆ ಚುನಾವಣೆಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ.
ಕೋಲ್ಕತ್ತಾದ ಬ್ರಿಗೇಡ್ ಮೈದಾನದಲ್ಲಿ ನಡೆದ ಬೃಹತ್ ರ‍್ಯಾಲಿಯಲ್ಲಿ ಸಮಗ್ರ ಅಭ್ಯರ್ಥಿ ಪಟ್ಟಿಯನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಘೋಷಣೆ ಮಾಡಿದರು.
ಭಾರತ ತಂಡದ ಮಾಜಿ ಕ್ರಿಕೆಟಿಗ ಯೂಸುಫ್‌ ಪಠಾಣ್‌ ಬೆಹ್ರಾಂಪುರ ಕ್ಷೇತ್ರದಿಂದ, ಅಭಿಷೇಕ್ ಬ್ಯಾನರ್ಜಿ ಡೈಮಂಡ್ ಹಾರ್ಬರ್‌ನಿಂದ ಟಿಕೆಟ್ ಪಡೆದರೆ, ಲೋಕಸಭೆಯಿಂದ ಉಚ್ಛಾಟಿತರಾಗಿರುವ ಮಹುವಾ ಮೊಯಿತ್ರಾ ಕೃಷ್ಣನಗರ ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ. ಒಟ್ಟು 42 ಅಭ್ಯರ್ಥಿಗಳ ಹೆಸರನ್ನು ಟಿಎಂಸಿ ಘೋಷಿಸಿದೆ.

Exit mobile version