Home ತಾಜಾ ಸುದ್ದಿ ಲಕ್ಷ್ಮಿ ಹೆಬ್ಬಾಳ್ಕರ್ ಅರೋಗ್ಯ ವಿಚಾರಿಸಲು ಯಾರೂ ಬರಬೇಡಿ: ವೈದ್ಯರ ಮನವಿ

ಲಕ್ಷ್ಮಿ ಹೆಬ್ಬಾಳ್ಕರ್ ಅರೋಗ್ಯ ವಿಚಾರಿಸಲು ಯಾರೂ ಬರಬೇಡಿ: ವೈದ್ಯರ ಮನವಿ

0

ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಳರ್ ಅವರಿಗೆ ಸಂಪೂರ್ಣ ವಿಶ್ರಾಂತಿಯ ಅವಶ್ಯಕತೆಯಿದ್ದು ಅವರನ್ನೂ ಭೇಟಿ ಮಾಡಲು ಬರದಂತೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಡಾ.ರವಿ ಪಾಟೀಲ್ ಅವರು ಮಾಧ್ಯಮದ ಮುಖಾಂತರ ಮನವಿ ಮಾಡಿದರು
ಲಕ್ಷ್ಮೀ ಹೆಬ್ಬಾಳ್ಕರ್​ ಆರೋಗ್ಯ ವಿಚಾರವಾಗಿ ಮಾತನಾಡಿದ ವೈದ್ಯ ರವಿ ಪಾಟೀಲ್​ ‘ ಕಾರು ಅಪಘಾತದಲ್ಲಿ ಆಗಿ ನಾಲ್ಕು ದಿನ ಆಯ್ತು. ಈ ಅಪಘಾತದಲ್ಲಿ ನಾಲ್ಕು ಜ‌ನ ಗಾಯಗೊಂಡಿದ್ದರು. ಈ ಅಪಘಾತದಲ್ಲಿ ಗಾಯಗೊಂಡಿದ್ದ ಚನ್ನರಾಜ ಹಟ್ಟಿಹೊಳಿ ಗುಣಮುಖರಾಗಿದ್ದಾರೆ. ಆದರೆ ಲಕ್ಷ್ಮೀ ಹೆಬ್ಬಾಳ್ಕರ್​ ಅವರ ಬೆನ್ನು ಮೂಳೆ ಮುರಿದಿದ್ದು, ಮೆದುಳು ಊದಿಕೊಂಡಿದೆ. ಇದಕ್ಕೆ ಚಿಕಿತ್ಸೆ ನೀಡಿದ್ದೇವೆ. ಅವರಿಗೆ 48 ತಾಸು ಕಂಪ್ಲೀಟ್ ರೆಸ್ಟ್ ಬೇಕು, ಮಾತಾಡಲೇಬಾರದು ಎಂದಿದ್ದಾರೆ. ಹಾಗಾಗಿ, ಅವರನ್ನು ನೋಡಲು, ಅರೋಗ್ಯ ವಿಚಾರಿಸಲು ಯಾರೂ ಬರಬಾರದು ಎಂದು ಡಾ ರವಿ ಪಾಟೀಲ್ ಮನವಿ ಮಾಡಿದ್ದಾರೆ.