Home ತಾಜಾ ಸುದ್ದಿ ರಾಷ್ಟ್ರಪತಿ ಭವನದಲ್ಲಿ ಮಲೇಶಿಯಾ ಪ್ರಧಾನಿಗೆ ಔಪಚಾರಿಕ ಸ್ವಾಗತ

ರಾಷ್ಟ್ರಪತಿ ಭವನದಲ್ಲಿ ಮಲೇಶಿಯಾ ಪ್ರಧಾನಿಗೆ ಔಪಚಾರಿಕ ಸ್ವಾಗತ

0
*ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಪತಿ ಭವನದಲ್ಲಿ ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಅವರನ್ನು ಸ್ವಾಗತಿಸಿದರು*

ನವದೆಹಲಿ: ಮಲೇಷ್ಯಾ ಪ್ರಧಾನಿ ಅನ್ವರ್ ಬಿನ್ ಇಬ್ರಾಹಿಂ ಅವರು ಎರಡು ದಿನಗಳ ಅಧಿಕೃತ ಭೇಟಿಗಾಗಿ ಭಾರತಕ್ಕೆ ಆಗಮಿಸಿದ್ದಾರೆ.
2018ರ ನಂತರ ಮೊದಲ ಬಾರಿಗೆ ಮಲೇಷ್ಯಾ ಪ್ರಧಾನಿ ಭೇಟಿ ನೀಡುತ್ತಿದ್ದಾರೆ ಆಗಸ್ಟ್ 19 ಮತ್ತು 21 ರಂದು ಪ್ರಧಾನಿ ನರೇಂದ್ರ ಮೋದಿಯವರ ಆಹ್ವಾನದ ಮೇರೆಗೆ ಮಲೇಷ್ಯಾ ಪ್ರಧಾನಿ ದೆಹಲಿಗೆ ಆಗಮಿಸಿದ್ದಾರೆ. ಇದು ಮಲೇಷ್ಯಾ ಪ್ರಧಾನಿಯಾಗಿ ಅನ್ವರ್ ಇಬ್ರಾಹಿಂ ಅವರ ಮೊದಲ ಭೇಟಿಯಾಗಿದೆ.

ಪ್ರಧಾನಿ ಅನ್ವರ್ ಬಿನ್ ಇಬ್ರಾಹಿಂ ಅವರನ್ನು ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ವಿಧ್ಯುಕ್ತವಾಗಿ ಸ್ವಾಗತಿಸಲಾಗಿದ್ದು ಬಳಿಕ ಪ್ರಧಾನಿ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

Exit mobile version