Home ತಾಜಾ ಸುದ್ದಿ ರಾಜ್ಯದಲ್ಲಿ ಡೆಂಗ್ಯೂ ಉಲ್ಬಣ: ಹಾವೇರಿಯಲ್ಲಿ ಜ್ವರದಿಂದ ಬಳಲುತ್ತಿದ್ದ ಬಾಲಕ ಸಾವು

ರಾಜ್ಯದಲ್ಲಿ ಡೆಂಗ್ಯೂ ಉಲ್ಬಣ: ಹಾವೇರಿಯಲ್ಲಿ ಜ್ವರದಿಂದ ಬಳಲುತ್ತಿದ್ದ ಬಾಲಕ ಸಾವು

0

ಹಾವೇರಿ: ಕಳೆದ ಒಂದು ವಾರದಿಂದ ಜ್ವರದಿಂದ ಬಳಲುತ್ತಿದ್ದ ಬಾಲಕ ಸಾವನ್ನಪ್ಪಿದ್ದಾನೆ.
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ಬಾಲಕ ಸಾವನ್ನಪ್ಪಿದ್ದಾನೆ. ಈತ ಕಳೆದ ಒಂದು ವಾರದಿಂದ ಜ್ವರದಿಂದ ಬಳಲುತ್ತಿದ್ದ ಎಂದು ತಿಳಿದುಬಂದಿದ್ದು, ಡೆಂಗ್ಯೂ ಜ್ವರದಿಂದ ಘಟನೆ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ರಾಣೇಬೆನ್ನೂರು ಟಿಎಚ್​ಒ ಭೇಟಿ ನೀಡಿ ಪರಿಶೀಲನೆ‌ ನಡೆಸಿದ್ದಾರೆ.

ರಾಜ್ಯದಲ್ಲಿ ಡೆಂಗ್ಯೂ ಪ್ರಕರಣ 7,000 ಗಡಿ ದಾಟಿದೆ: ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಈ ವರ್ಷ ದಾಖಲಾದ ಪ್ರಕರಣಗಳ ಪ್ರಕಾರ ರಾಜ್ಯದಲ್ಲಿ ಬರೋಬ್ಬರಿ 7,000 ಗಡಿಯನ್ನು ಮೀರಿದೆ. ಕರ್ನಾಟಕದಲ್ಲಿ 7,006 ಜನರಿಗೆ ವೈರಲ್ ಸೋಂಕು ಇರುವುದು ಪತ್ತೆಯಾಗಿದೆ. ಇನ್ನೂ ಡೆಂಗ್ಯೂ ಪ್ರಕರಣ ರಾಜ್ಯದಲ್ಲಿ ತಾಂಡವವಾಡುತ್ತಿದ್ದು, ಮಾರಕ ಜ್ವರಕ್ಕೆ ಮೃತಪಡುವವರ ಸಂಖ್ಯೆ ಕೂಡ ಹೆಚ್ಚಳವಾಗುತ್ತಿದೆ.

Exit mobile version