Home ನಮ್ಮ ಜಿಲ್ಲೆ ಯಾವ ರೀತಿಯ ಆಡಳಿತ ನಡೆಸುತ್ತಿದ್ದೀರಿ?!

ಯಾವ ರೀತಿಯ ಆಡಳಿತ ನಡೆಸುತ್ತಿದ್ದೀರಿ?!

0
pralhad joshi

ವಿಜಯಪುರ: ಸಿದ್ಧರಾಮಯ್ಯನವರೇ ಯಾವ ರೀತಿಯ ಆಡಳಿತ ನಡೆಸುತ್ತಿದ್ದೀರಿ?! ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರಶ್ನಿಸಿದ್ದಾರೆ.
ಹುಬ್ಬಳ್ಳಿ ಪ್ರಕರಣ ಕುರಿತು ಮಾತನಾಡಿರುವ ಅವರು “ರಾಮ ಮಂದಿರ ಉದ್ಘಾಟನೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಗೆ ರಾಮ ಮಂದಿರ ಆಗುವುದೆಂಬ ಕಲ್ಪನೆಯಾಗಲೀ ಇಚ್ಛೆಯಾಗಲೀ ಇರಲಿಲ್ಲ. ಶ್ರೀ ರಾಮನ ಅಸ್ಥತ್ವವನ್ನೇ ಪ್ರಶ್ನಿಸಿದವರು, ಈಗ ಉದ್ಘಾಟನೆಗೆ ಆಹ್ವಾನ ಬಂದಿರುವಾಗ ಹೋದರೆ ರಾಮ ಮಂದಿರದ ವಿರೋಧಿಗಳಿಗೆ ಘಾಸಿಯಾಗುವುದು, ಹೋಗದಿದ್ದರೆ ರಾಮ ಭಕ್ತರು ಪ್ರಶ್ನಿಸುವರು, ನುಂಗಲೂ ಆಗದ ಉಗುಳಲೂ ಆಗದ ಬಿಸಿ ತುಪ್ಪದಂತಹ ಪರಿಸ್ಥಿತಿ ಬಂದೊದಗಿದೆ. ಅವರ ಕೈಲಿ ಏನೂ ಆಗದ ಇಂತಹ ಕಸಿವಿಸಿಯಾಗುವ ಸಂದರ್ಭದಲ್ಲಿ ಏನಾದರೊಂದು ಮಾಡಬೇಕೆಂದು 30-35 ವರ್ಷ ಹಳೆಯ ಪ್ರಕರಣಗಳನ್ನು ಕೆದಕುತ್ತಿದ್ದಾರೆ. ಸಿದ್ಧರಾಮಯ್ಯನವರೇ ಯಾವ ರೀತಿಯ ಆಡಳಿತ ನಡೆಸುತ್ತಿದ್ದೀರಿ?!” ಎಂದಿದ್ದಾರೆ.

Exit mobile version