ಮಂಗಳೂರು: ಹೆಮ್ಮೆಯ ಗಂಡುಕಲೆ ಯಕ್ಷಗಾನ. ಕಲಾವಿದರ ಹೆಜ್ಜೆಗಾರಿಕೆಗೆ ಭಾಗವತಿಕೆಯ ಗಾಯನಕ್ಕೆ, ಮಾತುಗಾರಿಕೆಯ ಚಾತುರ್ಯಕ್ಕೆ ಮನ ಸೋಲದವರಿಲ್ಲ. ಅಂತಹ ಗಂಡುಕಲೆ ಯಕ್ಷಗಾನ ಇದೀಗ ಸಂದರ್ಭಕ್ಕೆ ತಕ್ಕುದಾದ ವಿಚಾರವನ್ನು ಧಾರೆಎರೆಯೋ ಮೂಲಕ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗುತ್ತಿದೆ. ಹೌದು, ಸದ್ಯ ಭಾರತ ಪಾಕ್ ನಡುವೆ ಉದ್ವಿಘ್ನ ಪರಿಸ್ಥಿತಿ ಇದೆ. ಇದೇ ಸಮಯದಲ್ಲಿ ಆಪರೇಷನ್ ಸಿಂದೂರದ ಮೂಲಕ ಪಾಕ್‌ಗೆ ಭಾರತ ಪ್ರತ್ಯುತ್ತರ ನೀಡಿದೆ. ಇದೇ ವಿಚಾರ ರಂಗಸ್ಥಳದಲ್ಲಿ ಸದ್ದು ಮಾಡಿದ ವೀಡಿಯೋ ವೈರಲ್ ಆಗಿದೆ.
ಪಾವಂಜೆ ಮೇಳದಲ್ಲಿ ಕಲಾವಿದ ದಿನೇಶ್ ಶೆಟ್ಟಿ ಆಪರೇಷನ್ ಸಿಂದೂರದ ಬಗ್ಗೆ ಮಾತನಾಡಿದ ಸಂಭಾಷಣೆಯ ವಿಡಿಯೋವೊಂದು ವೈರಲ್ ಆಗಿದೆ. ಶಾಸಕ ಸುನೀಲ್ ಕುಮಾರ್ ಎನ್ನುವವರು ತಮ್ಮ ಹೆಸರಿನ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದ್ದು, ಈ ವಿಡಿಯೋದಲ್ಲಿ ಪಾವಂಜೆ ಮೇಳದಲ್ಲಿ ಯಕ್ಷಗಾನ ಕಲಾವಿದ ದಿನೇಶ್ ಶೆಟ್ಟಿ ಆಪರೇಷನ್ ಸಿಂದೂರದ ಬಗ್ಗೆ ಮಾತನಾಡುತ್ತಿರುವುದು ಕಾಣಬಹುದು. “ಈ ಪವಿತ್ರವಾದ ನೆಲದಲ್ಲಿ ನಾನು ಹುಟ್ಟಿದವ. ಪವಿತ್ರವಾದ ಸಂಸ್ಕಾರವನ್ನು ಪಡೆದವ. ಈ ನೆಲಕ್ಕೆ ತಾಯಿಯೆಂದು ನಾವು ಕರೆಯುತ್ತೇವೆ. ತಾಯಿಯೆಂದು ಕರೆಯುವ ಈ ನೆಲ ಇದು ಬಿಟ್ಟರೆ ಇನ್ನೊಂದಿಲ್ಲ. ಹೀಗಾಗಿ ನಮಗೆ ದೇಶ ಪ್ರೇಮವನ್ನು ಕಲಿಸಿದೆ. ಬಿಟ್ರೆ ದೇಶ ದ್ರೋಹ ಮಾಡುವುದನ್ನು ಕಲಿಸಲಿಲ್ಲ” ಎಂಬ ಹೇಳಿಕೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವೇಳೆ ಸ್ತ್ರಿ ವೇಷದಾರಿಯೊಬ್ಬರು “ಈ ತಾಯಿಯ ಸಿಂದೂರ ಅಳಿಸಲು ಬಂದರೆ ಏನು ಮಾಡೋದು” ಎಂದಿದ್ದಾರೆ. ಇದಕ್ಕೆ ಉತ್ತರ ನೀಡಿದ ಕಲಾವಿದ ದಿನೇಶ್ ಶೆಟ್ಟಿ, “ತಾಯಿಯ ಸಿಂದೂರವನ್ನು ಒರೆಸುತ್ತೇನೆಂದು ಬಂದರೆ, ಈ ನೆಲದ ಒಬ್ಬಳು ಹೆಣ್ಣಿನ ಸಿಂಧೂರ ಒರೆಸಿದರೆ, ವೈರಿಗಳ ಸಾವಿರ ಸಾವಿರ ಮಡದಿಯದರ ಸಿಂಧೂರ ಅಳಿಸುವುದಕ್ಕೆ ನಾವೆಲ್ಲಾ ಸಿದ್ಧರಾಗಿ ನಿಂತಿದ್ದೇವೆ” ಎಂದು ಹೇಳುವುದು ಈ ವೀಡಿಯೊದಲ್ಲಿದೆ.