Home ಅಪರಾಧ ಮೋರಿಯಲ್ಲಿ ಹರಿದು ಬಂದ ಶವ

ಮೋರಿಯಲ್ಲಿ ಹರಿದು ಬಂದ ಶವ

0

ಧಾರವಾಡ: ಧಾರವಾಡದಲ್ಲಿ ಮಧ್ಯಾಹ್ನದ ಬಳಿಕ ಎಡೆಬಿಡದೇ ಮಳೆ ಸುರಿದಿದ್ದು, ಇಲ್ಲಿಯ ವಿವೇಕಾನಂದ ನಗರದ ಮೋರಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ.
ಮೋರಿಯಲ್ಲಿ ತೇಲಿ ಬಂದ ಶವ ಯಾರದ್ದು? ತೇಲಿ ಬಂದಿದ್ದೇ ಅಥವಾ ಬಿದ್ದಿರುವುದೇ ಎಂಬ ಬಗ್ಗೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿಯೇ ಶುಕ್ರವಾರ ಜಿಲ್ಲೆಯಲ್ಲಿ ಮಳೆ ಸುರಿದಿದ್ದು, ಇದರಿಂದ ರೈತರ ಮುಗದಲ್ಲಿ ಮಂದಹಾಸ ಮೂಡಿದರೆ ನಗರವಾಸಿಗಳಲ್ಲಿ ಬೇಸರ ಮೂಡಿಸಿದೆ. ಎಡೆಬಿಡದೇ ಸುರಿದ ಮಳೆಯಿಂದಾಗಿ ನಗರದೆಲ್ಲೆಡೆ ನೀರು ನಿಂತು ಜನಜೀವನ ಅಸ್ತವ್ಯಸ್ತವಾಯಿತು.

Exit mobile version