Home News ಮೋದಿ, ಶಾ ಜಗಳ ಹಚ್ಚುವ ಕೆಲಸ ಮಾಡುತ್ತಾರೆ, ನೀವು ಎಚ್ಚರದಿಂದಿರಿ ಸಿಎಂ, ಡಿಸಿಎಂಗೆ ಖರ್ಗೆ ಕಿವಿಮಾತು

ಮೋದಿ, ಶಾ ಜಗಳ ಹಚ್ಚುವ ಕೆಲಸ ಮಾಡುತ್ತಾರೆ, ನೀವು ಎಚ್ಚರದಿಂದಿರಿ ಸಿಎಂ, ಡಿಸಿಎಂಗೆ ಖರ್ಗೆ ಕಿವಿಮಾತು

ಕಲಬುರಗಿ: `ರಾಜ್ಯದಲ್ಲಿನ ಕಾಂಗ್ರೆಸ್ ಸರಕಾರವನ್ನು ಅಸ್ಥಿರಗೊಳಿಸಲು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಕುತಂತ್ರ ನಡೆಸಿದ್ದಾರೆ. ನೀವು ನಿಮ್ಮಲ್ಲಿ ಏನೇ ಭೇದಭಾವಗಳಿದ್ದರೂ ಒಗ್ಗಟ್ಟಿನಿಂದ ಇರಬೇಕು. ನೀವು ಹುಷಾರಾಗಿರಬೇಕು’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ ಅವರಿಗೆ ಕಿವಿಮಾತು ಹೇಳಿದರು.
ನಗರದ ಕೆಸಿಟಿ ಇಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ಬುಧವಾರ ನಡೆದ ಕಲ್ಯಾಣ ಕರ್ನಾಟಕ ಉದ್ಯೋಗ ಮೇಳ, ಯುವ ಸಮೃದ್ಧಿ ಸಮ್ಮೇಳನದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮೋದಿ, ಶಾ ನಿಮ್ಮಗಳ ಮಧ್ಯೆ ಜಗಳ ಹಚ್ಚುವ ಕೆಲಸ ಮಾಡುತ್ತಾರೆ. ಯಾವುದಕ್ಕೂ ತಾವು ಹುಷಾರಾಗಿದ್ದುಕೊಂಡು ಜನರ ರಕ್ಷಣೆಗಾಗಿ ನಿಲ್ಲಬೇಕು. ಅವರ ಕುತಂತ್ರದ ಬಗ್ಗೆ ಜಾಗೃತರಾಗಿರಬೇಕು ಎಂದರು. ಸಿಬಿಐ, ಇಡಿ, ಐಟಿ ಮುಂದಿಟ್ಟುಕೊಂಡು ಹೆದರಿಸುವ ಕೆಲಸ ಮಾಡುತ್ತಾರೆ. ಇದಕ್ಕೆ ಕಾಂಗ್ರೆಸ್‌ನವರು ಹೆದರಬಾರದು. ಜನರ ಆಶೀರ್ವಾದ ಮತ್ತು ಬೆಂಬಲ ಇದ್ದರೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರವನ್ನು ಒದ್ದು ಓಡಿಸೋಣ ಎಂದು ಗುಡುಗಿದರು.

Exit mobile version