Home ಅಪರಾಧ ಮೈಕ್ರೋ ಕ್ರೌರ್ಯ ಬೀದಿಗೆ ಬಂದ ಕುಟುಂಬ

ಮೈಕ್ರೋ ಕ್ರೌರ್ಯ ಬೀದಿಗೆ ಬಂದ ಕುಟುಂಬ

0

ಬೆಳಗಾವಿ: ಗಡಿನಾಡ ಬೆಳಗಾವಿ ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್‌ನವರ ಕ್ರೌರ್ಯ ಇನ್ನೂ ಮುಂದುವರೆದಿದೆ. ಸಾಲ ಪಡೆದು ಬೀದಿಗೆ ಬಂದು ನಿಲ್ಲತೊಡಗಿದ್ದಾರೆ. ಮೈಕ್ರೋ ಫೈನಾನ್ಸ್‌ನವರು ಸಾಲಗಾರರಿಗೆ ಬಲವಂತ ಮಾಡಬಾರದು, ಕಿರುಕುಳ ಕೊಡಬಾರದು ಎಂದು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರೂ ಯಾರೂ ಪಾಲನೆ ಮಾಡುತ್ತಿಲ್ಲ.
ಈಗ ಕಿತ್ತೂರು ತಾಲೂಕಿನ ಕುಲವಳ್ಳಿ ಗ್ರಾಮದ ಕುಟುಂಬವು ಮೈಕ್ರೋ ಫೈನಾನ್ಸ್‌ನವರ ಅಟ್ಟಹಾಸಕ್ಕೆ ಬೀದಿಗೆ ಬಂದು ನಿಂತಿದೆ. ಜೀವನ ನಿರ್ವಹಣೆಗೆ ಸಾಲ ಪಡೆದಿದ್ದ ಕುಲವಳ್ಳಿ ಗ್ರಾಮದ ದಸ್ತಗೀರಸಾಬ ಕುಟುಂಬ ಕಂತು ತುಂಬದೇ ಇದ್ದ ಹಿನ್ನೆಲೆಯಲ್ಲಿ ಮೈಕ್ರೋ ಫೈನಾನ್ಸದವರು ಮನೆ ಜಪ್ತಿ ಮಾಡಿದೆ. ಮನೆಯಲ್ಲಿದ್ದ ವಸ್ತುಗಳನ್ನೂ ತೆಗೆದುಕೊಳ್ಳಲು ಅವಕಾಶ ನೀಡದೇ ಫೈನಾನ್ಸ್ ಸಿಬ್ಬಂದಿ ಮನೆಗೆ ಬೀಗ ಜಡಿದು ಅವರನ್ನು ಹೊರದಬ್ಬಿದ್ದಾರೆ.
ಹೆಂಡತಿ, ಇಬ್ಬರು ಪುತ್ರರು, ಅಂಗವೈಕಲ್ಯ ಬಾಲಕಿ ಸೇರಿ ೧೫ ಜನರು ಬೀದಿಗೆ ಬಂದಿದ್ದು ಸದ್ಯ ದೇವಸ್ಥಾನದ ಮುಂಭಾಗದಲ್ಲಿ ಆಶ್ರಯ ಪಡೆದಿದ್ದಾರೆ. ಒಪ್ಪತ್ತಿನ ಊಟಕ್ಕೂ ಭಿಕ್ಷೆ ಬೇಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಮಾರು ೯ ಹಳ್ಳಿಗಳ ಜನರು ಕಳೆದ ಇಪ್ಪತೈದು ದಿನಗಳಿಂದ ತಮ್ಮ ಜಮೀನಿನ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದಾರೆ. ಅಂತಹುದರಲ್ಲಿ ಸಾಲ ಮರುಪಾವತಿ ಮಾಡಿಲ್ಲ ಎಂಬ ಕಾರಣ ನೀಡಿದ ಫೈನಾನ್ಸ್‌ನವರು ಮನೆ ಸೀಜ್ ಮಾಡಿದ್ದಾರೆ.

Exit mobile version