Home ತಾಜಾ ಸುದ್ದಿ ಮುಡಾ ಹಗರಣ: ರಾಜ್ಯಪಾಲರ ಕ್ರಮಕ್ಕೆ ಹೈಕೋರ್ಟ್‌ ಸಮ್ಮತಿ

ಮುಡಾ ಹಗರಣ: ರಾಜ್ಯಪಾಲರ ಕ್ರಮಕ್ಕೆ ಹೈಕೋರ್ಟ್‌ ಸಮ್ಮತಿ

0

ಬೆಂಗಳೂರು: ಮುಡಾ ಹಗರಣದ ಪ್ರಕರಣಕ್ಕೆ ಸಂಬಂಧಿಸಿದಂತೆ  ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮಕ್ಕೆ ಕರ್ನಾಟಕ ಹೈಕೋರ್ಟ್‌ ಸಮ್ಮತಿ ಸೂಚಿಸಿದೆ.

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಕ್ರಮವನ್ನು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಕೆ ಮಾಡಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾ ಮಾಡಿದೆ.

ಸಿಎಂ ವಿರುದ್ಧದ ತನಿಖೆಗೆ ತಡೆ ನೀಡಲು ಹೈಕೋರ್ಟ್‌ ನಿರಾಕರಿಸಿದೆ. ತನಿಖೆಯ ಅಗತ್ಯವಿದೆ ಎಂದಿರುವ ಹೈಕೋರ್ಟ್‌, ರಾಜ್ಯಪಾಲರು ಅನುಮತಿ ನೀಡಿರೋದು ಸರಿ ಇದೆ ಎಂದಿದೆ.

Exit mobile version