Home ತಾಜಾ ಸುದ್ದಿ ಮುಡಾ ಹಗರಣ ಬಂದಿರುವುದರಿಂದ ಕಾಂಗ್ರೆಸ್‌ಗೆ ಮಹದಾಯಿ ನೆನಪಾಗಿದೆ

ಮುಡಾ ಹಗರಣ ಬಂದಿರುವುದರಿಂದ ಕಾಂಗ್ರೆಸ್‌ಗೆ ಮಹದಾಯಿ ನೆನಪಾಗಿದೆ

0

ಹುಬ್ಬಳ್ಳಿ: ಮುಡಾ ಹಗರಣ ಬಂದಿರುವುದರಿಂದ ಕಾಂಗ್ರೆಸ್‌ಗೆ ಮಹದಾಯಿ ನೆನಪಾಗಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಹದಾಯಿ ವಿಚಾರದಲ್ಲಿ ಪ್ರಗತಿ ಆಗಿದೆ ಅಂದರೆ ಅದು ಬಿಜೆಪಿಯಿಂದ, ಕಾಂಗ್ರೆಸನಿಂದಲ್ಲ. ಕಾಂಗ್ರೆಸ್ ಮುಡಾ ಸಮಸ್ಯೆ ಡೈವರ್ಟ್ ಮಾಡಲು ಈಗ ಮಹದಾಯಿ ಬಗ್ಗೆ ಮಾತಾನಾಡುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂದುವರೇ ವರ್ಷ ಆಗಿದೆ. ಕಾಂಗ್ರೆಸ್ ನಾಯಕರಿಗೆ ಮಹದಾಯಿ ಯಾಕೆ ನೆನಪಿರಲಿಲ್ಲ..? ಸಿಎಂ, ಡಿಸಿಎಂ, ಇಲ್ಲಿಯ ಉಸ್ತುವಾರಿ ಮಂತ್ರಿಗಳು ಇದರ ಬಗ್ಗೆ ಮಾತಾಡಿಲ್ಲ ಎಂದರು.
ಮಹದಾಯಿ ವಿಷಯದಲ್ಲಿ ಪ್ರಗತಿ ಕಾಣುತ್ತಿದೆ ಅಂದರೆ ಅದು ಬಿಜೆಪಿಯಿಂದಾಗಿರುವ ಪ್ರಗತಿ. ಮಹದಾಯಿ ವಿಚಾರ ಹಾಗೇ ಬಿಡುವ ಪ್ರಶ್ನೆಯೇ ಇಲ್ಲ. ಅದಕ್ಕೊಂದು ತಾರ್ಕಿಕ ಅಂತ್ಯ ಕೊಡುವವರೆಗೂ ಹಿಂದೆ ಸರಿಯುವುದಿಲ್ಲ ಎಂದರು.
ಕಳೆದ ಹತ್ತು ವರ್ಷದಿಂದ ಕೇಂದ್ರ ಬಿಜೆಪಿ ರಾಜ್ಯಕ್ಕೆ ಮಲತಾಯಿ ಧೋರಣೆ ಮಾಡುತ್ತಿದೆ ಎಂದು ಸಚಿವ ಸಂತೋಷ್ ಲಾಡ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಕರ್ನಾಟಕ ಅಷ್ಟೇ ಅಲ್ಲ ದೇಶದ ಯಾವುದೇ ರಾಜ್ಯಕ್ಕೂ ಕೇಂದ್ರ ಬಿಜೆಪಿ ಅನ್ಯಾಯ ಮಾಡಿಲ್ಲ. ಮಲತಾಯಿ ದೋರಣೆ ಮಾಡುವ ಪ್ರಶ್ನೆಯು ಇಲ್ಲ ಎಂದರು.

Exit mobile version