ಮೈಸೂರು: ಕಾಂಗ್ರೆಸ್ ಸೇರಿ ಎಲ್ಲಾ ಪಕ್ಷದ ನಾಯಕರೂ ಸಹ ಮುಡಾ ಅಕ್ರಮ ವಿರುದ್ಧದ ಹೋರಾಟದಲ್ಲಿ ನನ್ನ ಜೊತೆಗಿದ್ದಾರೆ, ಸಿಎಂ ಪಕ್ಷದ ಕೆಲ ನಾಯಕರೂ ಸಹ ಅಕ್ರಮದ ದಾಖಲೆಗಳನ್ನು ಒದಗಿಸಿ ಹೋರಾಟಕ್ಕೆ ಸಮರ್ಥನೆ ನೀಡಿದ್ದಾರೆಂದು ಆರ್‌ಟಿಐ ಕಾರ‍್ಯಕರ್ತ ಸ್ನೇಹಮಯಿ ಕೃಷ್ಣ ಹೇಳಿದರು.
ಸುದ್ದಿಗಾರರೊಡನೆ ಮಾತನಾಡಿ, ಇಲ್ಲಿ ಪಕ್ಷ ಮುಖ್ಯವಲ್ಲ, ಕೆಲವರಿಗೆ ನೇರವಾಗಿ ಹೋರಾಟ ಮಾಡಲು ಸಾಧ್ಯವಾಗದ ಕಾರಣ ನನಗೆ ಬೆಂಬಲ ನೀಡುತ್ತಿದ್ದಾರೆ. ಅಕ್ರಮದಲ್ಲಿಯೂ ಎಲ್ಲಾ ಪಕ್ಷದವರು ಭಾಗಿಯಾಗಿದ್ದಾರೆ, ಎಲ್ಲರ ಒಳಗೊಳ್ಳುವಿಕೆಯೂ ಕಾಣುತ್ತಿದೆ ಎಂದರು.