Home ತಾಜಾ ಸುದ್ದಿ ಮಾರ್ಚ್ 15ರಿಂದ ಮೋದಿ ಕರ್ನಾಟಕ ಪ್ರವಾಸ

ಮಾರ್ಚ್ 15ರಿಂದ ಮೋದಿ ಕರ್ನಾಟಕ ಪ್ರವಾಸ

0

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬರುವ ಮಾರ್ಚ್ 17 ರ ಭಾನುವಾರದಂದು ಚುನಾವಣಾ ಪ್ರಚಾರಾರ್ಥ ಶಿವಮೊಗ್ಗಕ್ಕೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ, ಶಿವಮೊಗ್ಗದ ಅಲ್ಲಮಪ್ರಭು ಮೈದಾನದಲ್ಲಿ ಇಂದು ಪಕ್ಷದ ಪ್ರಮುಖ ಮುಖಂಡರೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ, ಕಾರ್ಯಕ್ರಮದ ಪೂರ್ವಭಾವಿ ಚರ್ಚೆ ನಡೆಸಲಾಯಿತು ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ. ಮಾ.17ರಂದು ಶಿವಮೊಗ್ಗಕ್ಕೆ ಪ್ರಧಾನಿ ಮೋದಿ ಭೇಟಿ ನೀಡಲಿದ್ದು ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಮಾ.17ರ ಮಧ್ಯಾಹ್ನ 2 ಗಂಟೆಗೆ ಕೇರಳದಿಂದ ನೇರವಾಗಿ ವಿಶೇಷ ಫ್ಲೈಟ್​ನಲ್ಲಿ ಆಗಮಿಸಲಿದ್ದು ಶಿವಮೊಗ್ಗದ ಫ್ರೀಡಂಪಾರ್ಕ್​ನಲ್ಲಿ ನಡೆಯಲಿರುವ ಬೃಹತ್ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.

ಮಾರ್ಚ್ 15ರಿಂದ ಮೋದಿ ಕರ್ನಾಟಕ ಪ್ರವಾಸ ಕೈಗೊಳ್ಳುತ್ತಿದ್ದು ಮಾರ್ಚ್ 15 ರಂದು ಕೋಲಾರದಲ್ಲಿ, ಮಾರ್ಚ್ 17 ರಂದು ಶಿವಮೊಗ್ಗದಲ್ಲಿ, 18 ರಂದು ಬೀದರ್‌ನಲ್ಲಿ ಮತ್ತು ಮಾರ್ಚ್ 19 ರಂದು ಧಾರವಾಡದಲ್ಲಿ ರ‍್ಯಾಲಿಗಳನ್ನು ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

Exit mobile version