Home ನಮ್ಮ ಜಿಲ್ಲೆ ಚಿಕ್ಕಮಗಳೂರು ಮಳೆರಾಯನ ಆರ್ಭಟ: ಸಿಡಿಲಿಗೆ ಓರ್ವ ಬಲಿ

ಮಳೆರಾಯನ ಆರ್ಭಟ: ಸಿಡಿಲಿಗೆ ಓರ್ವ ಬಲಿ

0

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಸೇರಿದಂತೆ ಬಯಲುಸೀಮೆ ಕೆಲವೆಡೆ ಶನಿವಾರ ಮಧ್ಯಾಹ್ನದ ನಂತರ ಗುಡುಗು ಸಹಿತ ಮಳೆಯಾಗಿದ್ದು, ಸಿಡಿಲಿಗೆ ಓರ್ವ ಬಲಿಯಾಗಿದ್ದಾರೆ.
ಎನ್‌.ಆರ್.ಪುರ ತಾಲೂಕಿನ ಅರಳಿಕೊಪ್ಪ ಗ್ರಾಮದ ಸಾಲೂರು ನಿವಾಸಿ ಶಂಕರ್‌ (50) ಮೃತಪಟ್ಟ ದುರ್ದೈವಿ.

ಅಡಿಕೆ ತೋಟದಲ್ಲಿ ಕೆಲಸ ಮಾಡುವ ವೇಳೆಯಲ್ಲಿ ಶಂಕರ್ ಅವರಿಗೆ ಸಿಡಿಲು ಹೊಡೆದಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

Exit mobile version