Home ಸಂಸ್ಕೃತಿ ಸಂಪದ ಮರಣ ಎಂದರೆ ಬಟ್ಟೆ ಕಳಚಿದಂತೆ…

ಮರಣ ಎಂದರೆ ಬಟ್ಟೆ ಕಳಚಿದಂತೆ…

0

ಭಗವಂತನು ಹೇಳಿದ ಪ್ರಸಿದ್ಧ ಮಾತು ವಾಸಾಂಸಿ ಜೀರ್ಣಾನಿ ಯಥಾ ವಿಹಾಯ ನವಾನಿ ಗೃಹ್ಣಾತಿ ನರೋಽಪರಾಣಿ | ತಥಾ ಶರೀರಾಣಿ ವಿಹಾಯಜೀರ್ಣನಿ ಅನ್ಯಾನಿ ಸಂಯಾತಿ ನವಾನಿ ದೇಹೀ||' ಜೀರ್ಣವಾದ ಬಟ್ಟೆಗಳನ್ನು ಕೈ ಬಿಟ್ಟು ಹೊಸ ಬಟ್ಟೆಗಳನ್ನು ತೊಟ್ಟುಕೊಳ್ಳುವಂತೆ, ಜೀರ್ಣವಾದ ಶರೀರವನ್ನು ಜೀವಾತ್ಮನು (ಅಂದರೆ ನಾವೆಲ್ಲರೂ) ಧರಿಸುತ್ತಾನೆ. ಮರಣ ಮತ್ತು ಪುನರ್ಜನ್ಮ ಪ್ರಕ್ರಿಯೆಗೆ ಸುಂದರ ಉದಾಹರಣೆಯನ್ನು ಭಗವಂತ ಹೇಳಿಕೊಟ್ಟಿದ್ದಾನೆ. ಬಟ್ಟೆಯ ಹೋಲಿಕೆಯನ್ನು ಶರೀರಕ್ಕೆ ಕೊಡಲಾಗಿದೆ. ಈಗಿರುವ ಶರೀರವು ತೊಟ್ಟುಕೊಂಡಿದ್ದು ಅಂದರೆ ಧರಿಸಿಕೊಂಡಿದ್ದು ಒಂದೇ ಬಟ್ಟೆಯನ್ನೆ. ಶಾಶ್ವತವಾಗಿ ಧರಿಸಿಕೊಂಡಿರಲು ಸಾಧ್ಯವಿಲ್ಲ. ಅಥವಾ ಒಂದೇ ಬಟ್ಟೆ ಹಾಳಾಗದೆ, ಶಾಶ್ವತವಾಗಿ ಇರಲೂ ಸಾಧ್ಯವಿಲ್ಲ. ಹಾಗೆಯೇ ಒಂದೇ ಶರೀರವನ್ನು ಧರಿಸಿಕೊಂಡಿರಲು ಸಾಧ್ಯವಿಲ್ಲ ಮತ್ತು ಒಂದೇ ಶರೀರವೆ ಶಿಥಿಲಗೊಳ್ಳದೆ ಶಾಶ್ವತವಾಗಿ ಇರಲು ಸಾಧ್ಯವಿಲ್ಲ. ಉದಾಹರಣೆಯನ್ನು ಭಗವಂತನ ಅಭಿಪ್ರಾಯಕ್ಕೆ ಹೊರತಾಗಿ ಬೇರೆ ಅರ್ಥದಲ್ಲಿ ಅರ್ಥ ಮಾಡಿಕೊಳ್ಳಬಾರದು. ಅಂಗಿಯನ್ನು ಕಳಚಿ ಇಡಲು ಆಯಾಸಪಡಬೇಕಾದ ಅಗತ್ಯವಿಲ್ಲ. ಅದೇ ರೀತಿ ಆಯಾಸಪಡದೆ ಶರೀರವನ್ನು ಕಳಚಿ ಇಡಲು ಬರುತ್ತದೆ ಎಂದು ಭಾವಿಸಿದರೆ ಭಗವಂತ ಕೊಟ್ಟ ಉದಾಹರಣೆಯನ್ನು ಬೇರೆ ಅರ್ಥದಲ್ಲಿ ಪರಿಗಣಿಸಿದಂತೆ ಆಗುತ್ತದೆ. ಹೀಗೆ ಪರಿಗಣಿಸಬಾರದು. ಇಲ್ಲಿ ಕೊಟ್ಟಿರುವ ದೃಷ್ಟಾಂತವು ಸುಲಭ ಎಂಬ ಅರ್ಥದಲ್ಲಿ ಅಲ್ಲ, ಸಹಜ ಎಂಬ ಅರ್ಥದಲ್ಲಿ ಕೊಟ್ಟಿದ್ದು. ಆದರೆ ಜ್ಞಾನಿಗಳಿಗೆ ಅಜ್ಞಾನಿಗಳಷ್ಟು ಕಷ್ಟವಾಗುವುದಿಲ್ಲ. ಹಾಗಾದರೆ ಅಜ್ಞಾನಿಗಳಾದ ನಾವು ಏನು ಮಾಡಬೇಕು? ಭಯಪಡುತ್ತ ಕುಳಿತುಕೊಳ್ಳಬೇಕೇ? ಹಾಗೆ ಭಯಪಡಬಾರದು, ದುಃಖಪಡಬಾರದು. ಇದನ್ನು ಹೇಳುವುದಕ್ಕೋಸ್ಕರವೆ ಭಗವದ್ಗೀತೆಯ ಉಪದೇಶ, ಭಕ್ತಿ ಮತ್ತು ಯೋಗಗಳನ್ನು ಬೆಳೆಸಿಕೊಳ್ಳಬೇಕು. ಭಕ್ತಿಯೆಂದರೆ ಭಗವಂತನಲ್ಲಿ ಪ್ರೀತಿ. ಭಗವಂತನಿಗೆ ಮೃತ್ಯುವಿಲ್ಲ. ಅವನು ನಮ್ಮನ್ನು ಕೈಯಿಂದ ಎತ್ತಿಕೊಂಡರೆ ನಮಗೂ ಮರಣವಿಲ್ಲದ ಸ್ಥಿತಿ ಬರುತ್ತದೆ. ಯೋಗ ಎಂದರೆ ಅಭ್ಯಾಸ. ಜೀವನವಿಡಿ ಶರೀರಕ್ಕೆ ತನ್ನನ್ನು ಕಟ್ಟಿಹಾಕಿಕೊಳ್ಳದೆ ಭಗವಂತನಿಗೆ ತನ್ನನ್ನು ತಾನು ಕಟ್ಟಿಕೊಳ್ಳಬೇಕು.ತಾನು ಶರೀರಕ್ಕೆ ಸೇರಿದವನಲ್ಲ, ಭಗವಂತನಿಗೆ ಸೇರಿದವನು.’ ಈ ರೀತಿ ಚಿಂತನೆಯನ್ನು ಜೀವನವಿಡಿ ಅಭ್ಯಾಸ ಮಾಡಿಕೊಂಡಿರಬೇಕು. ಇದನ್ನು ಭಗವಂತ `ಪ್ರಯಾಣಕಾಲೇ ಮನಸಾಽಚಲೇನ ಭಕ್ತಾ÷್ಯಯುಕ್ತೋಯೋಗಬಲೇನ ಚೈವ’ ಎಂಬ ಮಾತಿನಲ್ಲಿ ಹೇಳಿದ್ದಾನೆ.

Exit mobile version