Home ಸುದ್ದಿ ದೇಶ ‘ಮನ್‌ ಕಿ ಬಾತ್‌’ನಲ್ಲಿ : ಹೊಯ್ಸಳರ ದೇವಸ್ಥಾನ, ಪ್ರಸ್ತಾಪಿಸಿದ ನರೇಂದ್ರ ಮೋದಿ

‘ಮನ್‌ ಕಿ ಬಾತ್‌’ನಲ್ಲಿ : ಹೊಯ್ಸಳರ ದೇವಸ್ಥಾನ, ಪ್ರಸ್ತಾಪಿಸಿದ ನರೇಂದ್ರ ಮೋದಿ

0

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 105ನೇ ಸಂಚಿಕೆಯ ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಕರ್ನಾಟಕದ ಹೊಯ್ಸಳರಿಂದ ನಿರ್ಮಿತವಾದ ದೇವಸ್ಥಾನಗಳು ಒಳಗೊಂಡಿರುವ ವಿಚಾರವನ್ನೂ ಪ್ರಸ್ತಾಪಿಸಿ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಹಾಸನದ ಬೇಲೂರು ಮತ್ತು ಹಳೇಬೀಡಿನಲ್ಲಿರುವ ಚೆನ್ನಕೇಶವ ದೇವಸ್ಥಾನ, ಹೊಯ್ಸಲೇಶ್ವರ ದೇವಸ್ಥಾನ ಮತ್ತು ಕೇಶವ ದೇವಸ್ಥಾನಗಳನ್ನು ಯುನೆಸ್ಕೋ ಸಂಸ್ಥೆ ತನ್ನ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸಿತ್ತು. ಈ ವಿಚಾರವನ್ನು ಇಂದು ಪಿಎಂ ನರೇಂದ್ರ ಮೋದಿ ತಮ್ಮ 105ನೇ ಮನ್ ಕೀ ಬಾತ್ ಸಂಚಿಕೆಯಲ್ಲಿ ಪ್ರಸ್ತಾಪಿಸಿ ಹೆಮ್ಮೆ ವ್ಯಕ್ತಪಡಿಸಿದ್ದಾರೆ. 

Exit mobile version