Home News ಮಥುರಾದಲ್ಲಿ ಟ್ರ್ಯಾಕ್‌ ಬಿಟ್ಟು ಪ್ಲಾಟ್‌ಫಾರ್ಮ್‌ ಮೇಲೆ ಹತ್ತಿದ ರೈಲು

ಮಥುರಾದಲ್ಲಿ ಟ್ರ್ಯಾಕ್‌ ಬಿಟ್ಟು ಪ್ಲಾಟ್‌ಫಾರ್ಮ್‌ ಮೇಲೆ ಹತ್ತಿದ ರೈಲು

ಮಥುರಾ (ಉತ್ತರ ಪ್ರದೇಶ) : ಉತ್ತರ ಪ್ರದೇಶದ ಮಥುರಾ ಜಂಕ್ಷನ್‌ನಲ್ಲಿ ಕಳೆದ ತಡರಾತ್ರಿ ರೈಲು ಅಪಘಾತ ಸಂಭವಿಸಿದೆ. ಶಕುರ್ ಬಸ್ತಿಯಿಂದ ಬರುತ್ತಿದ್ದ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್ (ಇಎಂಯು) ರೈಲು ಹಠಾತ್ತನೆ ಹಳಿ ಬಿಟ್ಟು ಮಥುರಾ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್‌ ಮೇಲೆ ಹತ್ತಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ರೈಲು ಶಕುರ್ ಬಸ್ತಿಯಿಂದ ರಾತ್ರಿ 10:49ಕ್ಕೆ ಮಥುರಾ ನಿಲ್ದಾಣಕ್ಕೆ ಬಂದಿದ್ದು, ಎಲ್ಲಾ ಪ್ರಯಾಣಿಕರು ರೈಲಿನಿಂದ ಇಳಿದ ಕೆಲವೇ ಕ್ಷಣಗಳಲ್ಲಿ ಇದ್ದಕ್ಕಿದ್ದಂತೆ ರೈಲು ಪ್ಲಾಟ್‌ಫಾರ್ಮ್‌ಗೆ ನುಗ್ಗಿದೆ. ಪ್ರಯಾಣಿಕರು ರೈಲಿನಿಂದ ಇಳಿದಿದ್ದರಿಂದ ಘಟನೆಯಲ್ಲಿ ಪ್ರಾಣಹಾನಿ ಸಂಭವಿಸಿಲ್ಲ.

https://twitter.com/samyuktakarnat2/status/1706937786840850907
https://samyuktakarnataka.in/%e0%b2%86%e0%b2%9c%e0%b3%8d-%e0%b2%ab%e0%b2%bf%e0%b2%b0%e0%b3%8d-%e0%b2%9c%e0%b3%80%e0%b2%a8%e0%b3%87-%e0%b2%95%e0%b2%bf-%e0%b2%a4%e0%b2%ae%e0%b2%a8%e0%b3%8d%e0%b2%a8%e0%b2%be-%e0%b2%b9%e0%b3%88/
Exit mobile version