Home ತಾಜಾ ಸುದ್ದಿ ಮತ್ತೆ 64,000 ಕೋಟಿಗೆ ರಫೇಲ್ ವಿಮಾನ ಖರೀದಿ

ಮತ್ತೆ 64,000 ಕೋಟಿಗೆ ರಫೇಲ್ ವಿಮಾನ ಖರೀದಿ

0

ನವದೆಹಲಿ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಈಚೆಗೆ ಪ್ರವಾಸಿಗರ ಮೇಲೆ ಭಯೋತ್ಪಾದಕ ದಾಳಿ ಮಾಡಿದ ನಂತರ ಭಾರತ ಈಗ ಪಾಕಿಸ್ತಾನ ಆಕ್ರಮಣಕಾರಿ ಕ್ರಮಗಳನ್ನು ಕೈಗೊಂಡಿರುವುದರಿಂದ ಯುದ್ಧದ ಕಾರ್ಮೋಡದ ವಾತಾವರಣ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಭಾರತದ ರಕ್ಷಣಾ ಉದ್ದೇಶದಿಂದ ಫ್ರಾನ್ಸ್‌ನಿಂದ ೨೬ ರಫೇಲ್ ಎಂ ಯುದ್ಧ ವಿಮಾನಗಳನ್ನು ಖರೀದಿಸುವುದಕ್ಕೆ ೬೪ ಸಾವಿರ ಕೋಟಿ ರೂ.ಗಳ ಒಪ್ಪಂದಕ್ಕೆ ಸೋಮವಾರ ಸಹಿಹಾಕಲಾಗಿದೆ.
ಐಎನ್‌ಎಸ್ ವಿಕ್ರಾಂತ್ ಯುದ್ಧ ನೌಕೆಯಲ್ಲಿ ರಫೇಲ್ ಎಂ ಜೆಟ್‌ಗಳನ್ನು ನಿಯೋಜಿಸುವ ಸಲುವಾಗಿ ಫ್ರಾನ್ಸಿನ ಡಸಾಲ್ಟ್ ಏವಿಯೇಷನ್ ಸಂಸ್ಥೆಯಿಂದ ಈ ಯುದ್ಧ ವಿಮಾನಗಳನ್ನು ಖರೀದಿಸಲಾಗುತ್ತಿದೆ. ಭಾರತೀಯ ನೌಕಾಪಡೆಯು ಈ ಯುದ್ಧ ವಿಮಾನಗಳನ್ನು ಖರೀದಿಸುವ ಕುರಿತಂತೆ ಕೇಂದ್ರ ಸರ್ಕಾರದ ಮುಂದೆ ಬೇಡಿಕೆ ಇಟ್ಟಿತ್ತು.

Exit mobile version