Home ತಾಜಾ ಸುದ್ದಿ ಮತ್ತೆ ೫ ವರ್ಷ ಸಿಮಿ ನಿಷೇಧ

ಮತ್ತೆ ೫ ವರ್ಷ ಸಿಮಿ ನಿಷೇಧ

0

ನವದೆಹಲಿ: ಈಗಾಗಲೇ ನಿಷೇಧಕ್ಕೆ ಒಳಗಾಗಿರುವ ಸಿಮಿ ಉಗ್ರ ಸಂಘಟನೆಯ ಮೇಲೆ ಮತ್ತೆ ೫ ವರ್ಷ ನಿಷೇಧ ಮುಂದುವರಿಸಲು ಕೇಂದ್ರ ಗೃಹ ಇಲಾಖೆ ತೀರ್ಮಾನಿಸಿದೆ.
ದೇಶದಲ್ಲಿ ಕೋಮಭಾವನೆ ಕೆರಳಿಸಿ ಹಿಂಸಾಕೃತ್ಯಗಳಿಗೆ ಉತ್ತೇಜನ ನೀಡುತ್ತಿರುವುದರಿಂದ ನಿಷೇಧ ಮುಂದುವರಿಸಲಾಗಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ೨೦೧೪ ರಲ್ಲೇ ಯುಪಿಎ ಸರ್ಕಾರ ಈ ಸಂಸ್ಥೆಯನ್ನು ನಿಷೇಧಿಸಿತ್ತು. ೨೦೧೪ ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಹಾಗೂ ೨೦೧೭ ರಲ್ಲಿ ಗಯಾದಲ್ಲಿ ಸಂಭವಿಸಿದ ಸ್ಫೋಟಕ್ಕೆ ಈ ಸಂಸ್ಥೆ ಕಾರಣವಾಗಿತ್ತು. ೧೯೭೭ ರಲ್ಲಿ ಉತ್ತರ ಪ್ರದೇಶದಲ್ಲಿ ಈ ಸಂಸ್ಥೆ ಆರಂಭಗೊಂಡಿತು. ೨೦೦೧ ರಲ್ಲೇ ಇದನ್ನು ನಿಷೇಧಿಲಾಗಿದೆ. ಅಂದಿನಿಂದ ಈ ನಿಷೇಧ ಮುಂದುವರಿದಿದೆ.
ಸಿಮಿ ನಡೆದುಬಂದ ದಾರಿ :
ಭಾರತೀಯ ವಿದ್ಯಾರ್ಥಿಗಳ ಇಸ್ಲಾಮಿಕ್ ಮೂವ್‌ಮೆಂಟ್ (ಸಿಮಿ) ಮೂಲತಃ ಹಿಂದುತ್ವ ವಿರೋಧಿ.ಭಾರತವನ್ನು ಇಸ್ಲಾಮಿಕ್ ದೇಶ ಮಾಡಬೇಕೆಂಬುದೇ ಈ ಸಂಸ್ಥೆಯ ಗುರಿ.ಏಪ್ರಿಲ್ ೨೫, ೧೯೭೭ ರಲ್ಲಿ ಅಲಿಘರ್‌ನಲ್ಲಿ ಇದು ಆರಂಭವಾಯಿತು. ಇಲಿನಾಯ್ಸ್ ವಿವಿ ಪ್ರಾಧ್ಯಾಪಕರಾಗಿದ್ದ ಪ್ರೊ.ಮೊಹಮದ್ ಅಲ್ಲೂ ಸಿದ್ದಕಿ ಇದರ ಸಂಸ್ಥಾಪಕರು. ಮೊದಲು ಇದು ಜಮಾಯತ್ ಎ ಇಸ್ಲಾಮಿಕ್ ಹಿಂದ್ ಸಂಸ್ಥೆಯ ವಿದ್ಯಾರ್ಥಿಸಂಘಟನೆಯಾಗಿತ್ತು.ಪಿಎಲ್‌ಒ ನಾಯಕ ಯಾಸಿನ್ ಅರಾಫತ್ ಭಾರತಕ್ಕೆ ನೀಡಿದ್ದಾಗ ಇವರು ಪ್ರತಿಭಟಿಸಿದ್ದರಿಂದ ಜಮಾಯತ್ ಎ ಇಸ್ಲಾಮಿಕ್ ಹಿಂದ್ ಸಂಸ್ಥೆ ಸಿಮಿಯನ್ನು ದೂರವಿಟ್ಟಿತು.
ಸಿಮಿಗೆ ಅಂತಾರಾಷ್ಟ್ರೀಯ ನೆರವು
ನಂತರ ಸಿಮಿ ವಿದ್ಯಾರ್ಥಿ ವಿಭಾಗವನ್ನು ಪ್ರತ್ಯೇಕವಾಗಿ ತೆರೆಯಿತು. ಸಿಮಿ ಸಂಘಟನೆಗೆ ಸೌದಿ ಮೂಲದ ಉಗ್ರ ಒಸಾಮ ಬಿನ್
ಲಾಡೆನ್ ಆದರ್ಶಪುರುಷನಾಗಿ ಕಂಡ. ಡಾ. ಶಾಹಿದ್ ಬದರ್ ಫಲ್ಹಾ ಮೊದಲ ಅಧ್ಯಕ್ಷರಾದರು. ಕಾರ್ಯದರ್ಶಿ ಸಫ್ದರ್ ನಗೋರಿ ಬಂಧನಕ್ಕೆ ಒಳಗಾದರು.ಇಸ್ಲಾಮಿಕ್ ಅಂತಾರಾಷ್ಟ್ರೀಯ ಸಂಘಟನೆಗಳು ಈ ಸಂಸ್ಥೆಗೆ ನೆರವು ನೀಡುತ್ತಿದೆ.ಪಾಕ್ ನಿಂದಲೂ ಹಣ ಬರುತ್ತಿದೆ ಎಂಬ ಆರೋಪವಿದೆ.

Exit mobile version