Home ಅಪರಾಧ ಮತಾಂತರ: ಚರ್ಚ್ ಪಾಸ್ಟರ್ ಬಂಧನ

ಮತಾಂತರ: ಚರ್ಚ್ ಪಾಸ್ಟರ್ ಬಂಧನ

0

ಪಣಜಿ: ವರ್ಷದ ಕೊನೆಯ ದಿನ, ೨೦೨೩ರ ೩೧ ರ ರಾತ್ರಿ ಗೋವಾದಲ್ಲಿ ವಂಚನೆ ಮತ್ತು ಅಕ್ರಮ ಮತಾಂತರ ನಡೆದಿದೆ. ಶಿವೊಲಿಯಲ್ಲಿರುವ ಬಿಲೀವರ್ಸ್ ಫೈವ್ ಪಿಲ್ಲರ್ ಚರ್ಚ್‌ನ ಪಾಸ್ಟರ್ ಡೊಮ್ನಿಕ್ ಡಿಸೋಜಾ ಮತ್ತು ಅವರ ಪತ್ನಿ ಜೋನ್ ಮಸ್ಕರೇನ್ಹಸ್ ವಿರುದ್ಧ ಮ್ಹಪಾಸಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಶಂಕಿತ ಡೊಮ್ನಿಕ್‌ನನ್ನು ಬಂಧಿಸಿದ್ದಾರೆ.
ಡೊಮ್ನಿಕ್ ಫೋಂಡಾದ ೪೦ ವರ್ಷದ ಇಸ್ಮಾಗೆ ಮತಾಂತರಗೊಳ್ಳುವಂತೆ ಬೆದರಿಕೆ ಹಾಕಿದ್ದಾನೆ. ಡೊಮ್ನಿಕ್ ಹೇಳಿದ ಧರ್ಮಕ್ಕೆ ಮತಾಂತರಗೊಳ್ಳುವಂತೆ ಆಮಿಷ ಒಡ್ಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಬ್ಲ್ಯಾಕ್ ಮ್ಯಾಜಿಕ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕಳೆದ ಎರಡು ವರ್ಷಗಳಲ್ಲಿ ಡೊಮ್ನಿಕ್ ಡಿಸೋಜಾ ವಿರುದ್ಧ ಮತಾಂತರದ ದೂರು ದಾಖಲಾಗಿದ್ದು, ಇದೇ ಸೆಕ್ಷನ್ ಅಡಿಯಲ್ಲಿ ಅವರ ವಿರುದ್ಧ ದಾಖಲಾಗಿರುವ ಮೂರನೇ ಪ್ರಕರಣ ಇದಾಗಿದೆ. ಡೊಮ್ನಿಕ್ ವಿರುದ್ಧ ಈಗಾಗಲೇ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ೫ ಪ್ರಕರಣಗಳನ್ನು ದಾಖಲಿಸಲಾಗಿದೆ. ಈತನ ವಿರುದ್ಧ ಇದುವರೆಗೆ ಒಟ್ಟು ೮ ಪ್ರಕರಣಗಳು ದಾಖಲಾಗಿವೆ.

Exit mobile version