Home ತಾಜಾ ಸುದ್ದಿ ಮಂತ್ರಾಲಯಕ್ಕೆ ವಿಜಯೇಂದ್ರ ಭೇಟಿ

ಮಂತ್ರಾಲಯಕ್ಕೆ ವಿಜಯೇಂದ್ರ ಭೇಟಿ

0

ರಾಯಚೂರು: ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿಗಳ ಮಠಕ್ಕೆ ಭಾನುವಾರ ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ ನೀಡಿದರು.
ಮೊದಲಿಗೆ ಗ್ರಾಮ ದೇವತೆ ಮಂಚಾಲಮ್ಮದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಶ್ರೀಗುರುರಾಯರ ಮೂಲ ಬೃಂದಾವನದ ದರ್ಶನ ಪಡೆದರು.
ಶ್ರೀಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಬಿ.ವೈ ವಿಜಯೇಂದ್ರ ಅವರಿಗೆ ನಂತರ ಫಲಮಂತ್ರಾಕ್ಷತೆ ವಿತರಿಸಿ ಆಶೀರ್ವದಿಸಿದರು.

Exit mobile version