Home ತಾಜಾ ಸುದ್ದಿ ಮಂಗಳೂರಿನಲ್ಲಿ ಪ್ರಧಾನಿ ಮೋದಿ ಭರ್ಜರಿ ರೋಡ್‌ ಶೋ

ಮಂಗಳೂರಿನಲ್ಲಿ ಪ್ರಧಾನಿ ಮೋದಿ ಭರ್ಜರಿ ರೋಡ್‌ ಶೋ

0

ಮಂಗಳೂರು: ಲೋಕಸಭೆ ಚುನಾವಣಾ ಪ್ರಚಾರಕ್ಕೆಂದು ರಾಜ್ಯಕ್ಕೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಮಂಗಳೂರಿನಲ್ಲಿ ರೋಡ್​ ಶೋ ನಡೆಸಿದರು. ವಿವಿಧ ಭಾಗಗಳಿಂದ ರೋಡ್ ಶೋಗೆ ಮೋದಿ ಅಭಿಮಾನಿಗಳು ಬಂದಿದ್ದರು. ಪ್ರಧಾನಿಯವರನ್ನು ಕಣ್ತುಂಬಿಕೊಳ್ಳಲು ಜನಸಾಗರವೇ ಹರಿದು ಬಂದಿತ್ತು. ಎರಡು ಕಿಲೋಮೀಟರ್ ರಸ್ತೆಯ ಎರಡು ಬದಿಯಲ್ಲಿಯೂ ಕಿಕ್ಕಿರಿದ ಅಭಿಮಾನಿಗಳು ಮೋದಿಗೆ ಜೈಕಾರ ಹಾಕಿದರು. ಮೋದಿ ಮುಖವಾಡ, ಧ್ವಜ, ಕೇಸರಿ ಟೋಪಿ ಧರಿಸಿಕೊಂಡು ಘೋಷಣೆ ಕೂಗಿದರು.

Exit mobile version