Home ತಾಜಾ ಸುದ್ದಿ ಬೆಳಗಾವಿ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಬಂದಿದ್ದ ಕಾರ್ಯಕರ್ತ ಹೃದಯಾಘಾತದಿಂದ ಸಾವು

ಬೆಳಗಾವಿ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಬಂದಿದ್ದ ಕಾರ್ಯಕರ್ತ ಹೃದಯಾಘಾತದಿಂದ ಸಾವು

0

ಹಾವೇರಿ: ಬೆಳಗಾವಿ ಕಾಂಗ್ರೆಸ್ ಕಾರ್ಯಕ್ರಮಕ್ಕೆ ತೆರಳಿದ್ದ ಹಾವೇರಿ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಬೆಳಗಾವಿಯಲ್ಲಿ ಮಂಗಳವಾರ ಆಯೋಜಿಸಿದ್ದ ಕಾಂಗ್ರೆಸ್ ಪಕ್ಷದ ಐತಿಹಾಸಿಕ ಜೈ ಬಾಪು-ಜೈ ಭೀಮ್- ಜೈ ಸಂವಿಧಾನ ಅಭಿಯಾನ ಕಾರ್ಯಕ್ರಮ ಕ್ಕೆ‌ತೆರಳಿದ್ದ ಕಾರ್ಯಕರ್ತ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ‌‌ ನದಿಹರಳ ಹಳ್ಳಿ ಗ್ರಾಮದ ಬಸಪ್ಪ ಕೆಂಚಪ್ಪ ಪಾಮೇನಹಳ್ಳಿ(75) ಎಂದು‌ ಗುರುತಿಸಲಾಗಿದೆ. ನದಿಹರಳಹಳ್ಳಿ ಗ್ರಾಮದಿಂದ ಮಂಗಳವಾರ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಬಸ್‌ನಲ್ಲಿ ಬೆಳಗಾವಿಗೆ ‌ತೆರಳಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿದ್ದ ಬಸಪ್ಪ ಪಾಮೇನಹಳ್ಳಿ ಅವರಿಗೆ‌ ಮಂಗಳವಾರ ಮಧ್ಯಾಹ್ನ 1:30ರ ಸುಮಾರಿಗೆ ಹೃದಯಾಘಾತವಾಗಿದೆ. ತಕ್ಷಣ ಇವರನ್ನು ಬೆಳಗಾವಿಯ‌ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ‌ಫಲಕಾರಿಯಾಗದೇ ತಡ ರಾತ್ರಿ 12:30ರ‌ ಸುಮಾರಿಗೆ ಸಾವನ್ನಪ್ಪಿದ್ದಾರೆ.

Exit mobile version