Home News ಬೆಂಗಾವಲು ವಾಹನ ಡಿಕ್ಕಿ: ತೊಗಾಡಿಯಾ ಅಪಾಯದಿಂದ ಪಾರು

ಬೆಂಗಾವಲು ವಾಹನ ಡಿಕ್ಕಿ: ತೊಗಾಡಿಯಾ ಅಪಾಯದಿಂದ ಪಾರು

ಬಾಗಲಕೋಟೆ: ಜಮಖಂಡಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಲು ನಗರದಿಂದ ತೆರಳುತ್ತಿದ್ದ ಡಾ.ಪ್ರವೀಣಬಾಯ್ ತೊಗಾಡಿಯಾ ಅವರ ವಾಹನಕ್ಕೆ ಬೆಂಗಾವಲು ಪಡೆ ವಾಹನ ಡಿಕ್ಕಿಯಾಗಿದೆ. ಅದೃಷ್ಟವಶಾತ್ ತೋಗಾಡಿಯಾ ಅವರು ಯಾವುದೇ ತೊಂದರೆ ಇಲ್ಲದೆ ಪಾರಾಗಿದ್ದಾರೆ.
ಬಾಗಲಕೋಟೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಂಗಳವಾರ ಸಂಜೆ ಜಮಖಂಡಿ ಕಡೆಗೆ ತೆರಳುತ್ತಿದ್ದ ತೊಗಾಡಿಯಾ ಅವರ ವಾಹನಕ್ಕೆ ಮುಧೋಳ ಬೈಪಾಸ್ ರಸ್ತೆಯಲ್ಲಿ ಅವರದೇ ಬೆಂಗಾವಲು ಪಡೆ ವಾಹನ ಡಿಕ್ಕಿ ಹೊಡೆದಿತ್ತು. ಕೆಲಕಾಲ ಇದು ಆತಂಕಕ್ಕೆ ಕಾರಣವಾಗಿತ್ತು. ಅದೃಷ್ಟವಶಾತ್ ತೊಗಾಡಿಯಾ ಸೇರಿ ವಾಹನದಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮುಂದೆ ಅವರನ್ನು ಪೊಲೀಸರು ತಮ್ಮ ವಾಹನದಲ್ಲಿ ಕರೆದುಕೊಂಡು ಜಮಖಂಡಿಗೆ ತಲುಪಿಸಿದ್ದಾರೆ. ಎಸ್ಪಿ ವೈ.ಅಮರನಾಥ ರೆಡ್ಡಿ ಸ್ಥಳಕ್ಕೆ ಭೆಟ್ಟಿ ನೀಡಿ ಪರಿಶೀಲಿಸಿದ್ದಾರೆ.

Exit mobile version