Home ತಾಜಾ ಸುದ್ದಿ ಬೀದರ್‌ನಿಂದ ಚಾಮರಾಜನಗರವರೆಗೆ ಅತಿ ದೊಡ್ಡ ಮಾನವ ಸರಪಳಿ

ಬೀದರ್‌ನಿಂದ ಚಾಮರಾಜನಗರವರೆಗೆ ಅತಿ ದೊಡ್ಡ ಮಾನವ ಸರಪಳಿ

0

ಬೆಂಗಳೂರು: ಮಾನವ ಸರಪಳಿ ನಿರ್ಮಾಣದಲ್ಲಿ ನಾವು ನೀವೆಲ್ಲರೂ ಜೊತೆಯಾಗಿ ಕೈಜೋಡಿಸೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತಂತೆ ವಿಡಿಯೋ ಸಂದೇಶವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರು ನಮಗೆ ನೀಡಿರುವ ಈ ಶ್ರೇಷ್ಠ ಸಂವಿಧಾನವನ್ನು ಉಳಿಸುವ, ಅದರ ಆಶಯಗಳಂತೆ ಬದುಕುವ ಹೊಣೆ ಪ್ರತಿಯೊಬ್ಬ ಭಾರತೀಯನದು. ಈ ದೇಶದ ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ಸಿದ್ಧಾಂತಗಳು ಉಳಿದರಷ್ಟೆ ಭಾರತದ ಉಳಿವು. ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದಂದು ಬೀದರ್‌ ನಿಂದ ಚಾಮರಾಜನಗರದ ವರೆಗಿನ 2,500 ಕಿಮೀ ಉದ್ದದ ಮಾನವ ಸರಪಳಿ ನಿರ್ಮಾಣದಲ್ಲಿ ನಾವು ನೀವೆಲ್ಲರೂ ಜೊತೆಯಾಗಿ, ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಗೊಳಿಸಲು ಕೈಜೋಡಿಸೋಣ ಎಂದಿದ್ದಾರೆ.

ಬೀದರ್‌ನಿಂದ ಚಾಮರಾಜನಗರವರೆಗೆ ಅತಿ ದೊಡ್ಡ ಮಾನವ ಸರಪಳಿ

Exit mobile version