Home ನಮ್ಮ ಜಿಲ್ಲೆ ಚಿಕ್ಕಮಗಳೂರು ಬಿಜೆಪಿ- ಜೆಡಿಎಸ್‌ನಿಂದ ದ್ವೇಷದ ರಾಜಕಾರಣ

ಬಿಜೆಪಿ- ಜೆಡಿಎಸ್‌ನಿಂದ ದ್ವೇಷದ ರಾಜಕಾರಣ

0

ಈ ಆಪರೇಷನ್ ಬಿಟ್ಟು ಕರ್ನಾಟಕಕ್ಕೆ ಪ್ರಯೋಜನವಾಗುವ ಕಲಸ ಮಾಡಿ

ಚಿಕ್ಕಮಗಳೂರು: ಬಿಜೆಪಿ ಮತ್ತು ಜೆಡಿಎಸ್‌ನವರು ಏನಾದರೂ ಮಾಡಿ ನಮ್ಮ ಸರ್ಕಾರ ಬೀಳಿಸುವ ಪ್ರಯತ್ನ ಮಾಡುತ್ತಿದ್ದಾರೆ‌. ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣೇಭೈರೆಗೌಡ ಎಂದರು.
ಸೋಮವಾರ ಜಿಲ್ಲೆಯ ಮಳೆಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸುದ್ದಿಗಾರರ ಜತೆ ಮಾತನಾಡಿ ದರು. ಕೇಂದ್ರದಲ್ಲಿ ಎನ್ ಡಿಎ ಸರ್ಕಾರ ಇದೆ. ಕುಮಾರಸ್ವಾಮಿ ಅವರು ಮಂತ್ರಿಯಾಗಿದ್ದಾರೆ. ರಾಜ್ಯಕ್ಕೆ ಇವರ ಕೊಡುಗೆ ಏನು ಎಂದು ಪ್ರಶ್ನಿಸಿದರು.

ರಾಜ್ಯದ ಜನತೆ ನಮಗೆ ಅಧಿಕಾರ ನೀಡಿದ್ದು ದ್ವೇಷ ರಾಜಕಾರಣ ಮಾಡಲೋ ರಾಜ್ಯಕ್ಕೆ ಉಪಕಾರ ಮಾಡುವುದಕ್ಕೋ ಎಂದರು. ಸರ್ಕಾರ ಬೀಳಿಸುವುದು ಎತ್ತುವುದು ಜನ ಮಾಡುತ್ತಾರೆ. ಸರ್ಕಾರ ಬೀಳಿಸುವುದೇ ನಿಮ್ಮ ಸಾಧನೆಯೇ, ನಿಮ್ಮ ಸಾಧನೆ ಕೊಡುಗೆ ಬಗ್ಗೆ ಹೇಳಿ ಎಂದರು.
ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಮುಚ್ಚಿಹಾಕಲು ಗಿಮಿಕ್ ನಾಟಕಗಳನ್ನು ಮಾಡುತ್ತಿದ್ದಾರೆ. ಮೇಕೆದಾಟು, ಭದ್ರಮೇಲ್ದಂಡೆ, ಯೋಜನೆ ಬರಬೇಕಾದ ಅನುದಾನ‌ ಕೊಡಿಸುವ ಕೆಲಸ ಮಾಡಿ ಎಂದು‌ ತಿಳಿಸಿದರು. ಬಿಜೆಪಿ ಜೆಡಿಎಸ್ ಇಬ್ಬರು ಸೇರಿ ಜಾಯಿಂಟ್ ಆಪರೇಷನ್ ಮಾಡುತ್ತಿದ್ದಾರೆ. ಅದು ಸಕ್ಸಸ್ ಫೆಲ್ಯೂರ್ ನೋಡೋಣ, ಈ ಆಪರೇಷನ್ ಬಿಟ್ಟು ಕರ್ನಾಟಕಕ್ಕೆ ಪ್ರಯೋಜನವಾಗುವ ಕಲಸ ಮಾಡಿ ಎಂದರು.

Exit mobile version