Home ತಾಜಾ ಸುದ್ದಿ ಬಿಜೆಪಿಯ ಮಿಷನ್‌ನಿಂದ ಕನ್ನಡದ ವಿಸ್ತಾರ

ಬಿಜೆಪಿಯ ಮಿಷನ್‌ನಿಂದ ಕನ್ನಡದ ವಿಸ್ತಾರ

0

ಮೈಸೂರು: ನಾವು ಸಂಕಲ್ಪ ಪತ್ರದಲ್ಲಿ ಸ್ಥಳೀಯ ಭಾಷೆಗಳ ಪ್ರೋತ್ಸಾಹ ನೀಡುವುದಾಗಿ ಹೇಳಿದ್ದೇವೆ. ಕನ್ನಡ ದೇಶದ ಸಮೃದ್ಧ ಭಾಷೆ. ಬಿಜೆಪಿಯ ಈ ಮಿಷನ್‌ನಿಂದ ಕನ್ನಡದ ವಿಸ್ತಾರವಾಗುತ್ತದೆ ಹಾಗೂ ಹೆಚ್ಚಿನ ಮಾನ್ಯತೆ ಸಿಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಬೃಹತ್‌ ಸಮಾವೇಶದಲ್ಲಿ 4 ಕ್ಷೇತ್ರದ ಮೈತ್ರಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದ ಅವರು, ಮೈಸೂರು, ಹಂಪಿ ಬಾದಾಮಿ ರೀತಿಯ ಹೆರಿಟೇಜ್‌ ಸೈಟ್‌ಗಳನ್ನು ವಿಶ್ವ ಟೂರಿಸಂ ಭೂಪಟದಲ್ಲಿ ಪ್ರಮೋಟ್‌ ಮಾಡಲಿದ್ದೇನೆ. ಇದರಿಂದ ಕರ್ನಾಟಕದಲ್ಲಿ ಟೂರಿಂಸಂ ಹಾಗೂ ಉದ್ಯೋಗಾವಕಾಶಗಳು ಹೆಚ್ಚುತ್ತವೆ. ಇವೆಲ್ಲವೂ ಜಾರಿಯಾಗಲು ಬಿಜೆಪಿ ಅಗತ್ಯವಿದೆ. ಎನ್‌ಡಿಎ ಅಗತ್ಯದೆ. ಎನ್‌ಡಿಎ ಏನು ಹೇಳುತ್ತೋ ಅದನ್ನು ಮಾಡುತ್ತದೆ ಎಂದರು

Exit mobile version