Home ತಾಜಾ ಸುದ್ದಿ ಬಾವಿ ಸ್ವಚ್ಛಕ್ಕೆ ಇಳಿದಿದ್ದ 8 ಜನರು ಉಸಿರುಗಟ್ಟಿ ಸಾವು

ಬಾವಿ ಸ್ವಚ್ಛಕ್ಕೆ ಇಳಿದಿದ್ದ 8 ಜನರು ಉಸಿರುಗಟ್ಟಿ ಸಾವು

0

ಖಾಂಡ್ವಾ: ಗಂಗಾಮಾತೆಯ ಮೂರ್ತಿ ವಿಸರ್ಜನೆಗಾಗಿ ಬಾವಿ ಸ್ವಚ್ಛಗೊಳಿಸಲು ಇಳಿದಿದ್ದ ಎಂಟು ಜನರು ದುರಂತಮಯ ಸಾವು ಕಂಡ ಘಟನೆ ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯ ಕೊಂಡಾವತ್ ಗ್ರಾಮದಲ್ಲಿ ಬುಧವಾರ ಸಂಭವಿಸಿದೆ. ಬಾವಿಯೊಳಗೆ ಮೀಥೆನ್ ಅನಿಲ ಸೋರಿಕೆಯಾಗಿರುವುದೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಈ ನತದೃಷ್ಟರು ೧೫೦ ವರ್ಷಗಳಷ್ಟು ಹಳೆಯ ಬಾವಿ ಸ್ವಚ್ಚಗೊಳಿಸಲು ಇಳಿದಾಗ ಅದರೊಳಗೆ ಸಂಗ್ರಹವಾಗಿದ್ದ ಮಿಥೇನ್ ಅನಿಲದಿಂದ ಉಸಿರುಗಟ್ಟಿ ಸಾವನ್ನಪ್ಪಿದರು. ಬಾವಿಯಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ತಲಾ ೪ ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ. ಕಳೆದ ಹಲವಾರು ವರ್ಷಗಳಿಂದ ಮೂರ್ತಿಗಳನ್ನು ಜಲಸ್ತಂಭನಗೊಳಿಸಲು ಈ ಬಾವಿಯನ್ನು ಬಳಸಲಾಗುತ್ತಿದೆ. ಆದರೆ ಈ ಬಾರಿ ಬಾವಿಯಲ್ಲಿ ೮ ಜನರು ಪ್ರಾಣ ಕಳೆದುಕೊಂಡಿರುವುದರಿಂದ ಗ್ರಾಮಸ್ಥರಲ್ಲಿ ಶೋಕ ಮಡುಗಟ್ಟಿದೆ.

Exit mobile version