Home News ಬಾಲ್ಯ ವಿವಾಹ: ನಾಲ್ವರ ವಿರುದ್ಧ ಪ್ರಕರಣ ದಾಖಲು

ಬಾಲ್ಯ ವಿವಾಹ: ನಾಲ್ವರ ವಿರುದ್ಧ ಪ್ರಕರಣ ದಾಖಲು

ಕನಕಗಿರಿ: ತಾಲೂಕಿನ ಗ್ರಾಮವೊಂದರಲ್ಲಿ ಅಪ್ರಾಪ್ತ ಬಾಲಕಿ ವಿವಾಹವಾದ ಘಟನೆಗೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏ. 26ರಂದು ಬೆಳಿಗ್ಗೆ ಗ್ರಾಮದಲ್ಲಿ ಬಾಲ್ಯ ವಿವಾಹ ನಡೆದಿದ್ದು, ವಿವಾಹವಾದ ಯುವಕ ಹನುಮೇಶ ಗದ್ದಿ, ವರನ ತಾಯಿ ಶರಣಮ್ಮ ಗದ್ದಿ, ಅಪ್ರಾಪ್ತ ಬಾಲಕಿ ತಂದೆ ಶರಣಪ್ಪ ನಾರಾಯಣಪುರ, ಬಾಲಕಿಯ ತಾಯಿ ಜಯಶ್ರೀ ನಾರಾಯಣಪುರ ವಿರುದ್ಧ ಏ. 27ರಂದು ಪ್ರಕರಣ ದಾಖಲಾಗಿದೆ.
16 ವರ್ಷ, ಒಂಬತ್ತು ತಿಂಗಳ ಬಾಲಕಿಗೆ ವಿವಾಹವಾಗಿದೆ ಎಂಬ ಮಾಹಿತಿ ಮಕ್ಕಳ ಸಹಾಯವಾಣಿ 1098ಗೆ ಲಭಿಸಿದ್ದು, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಾಹಿತಿ ಮೇರೆಗೆ ಶಿಶು ಅಭಿವೃದ್ಧಿ ಮೇಲ್ವಿಚಾರಕಿ ಶ್ರೀಶೈಲ ಸಾಲಿಮಠ ದೂರಿನ್ವಯ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version