Home ತಾಜಾ ಸುದ್ದಿ ಬರಲಿದೆ ಹೊಸ 20 ರೂ. ನೋಟು

ಬರಲಿದೆ ಹೊಸ 20 ರೂ. ನೋಟು

0

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಇದೀಗ 20 ರೂ. ಮುಖ ಬೆಲೆಯ ಹೊಸ ವಿನ್ಯಾಸದ ನೋಟುಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ ಎಂದು ತಿಳಿಸಿದೆ.
ಗವರ್ನರ್ ಸಂಜಯ್ ಮಲ್ಹೋತ್ರಾ ಅವರ ಸಹಿ ಹೊಂದಿರುವ 20 ರೂ. ಮುಖಬೆಲೆಯ ನೋಟುಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ, ಈ ನೋಟುಗಳ ವಿನ್ಯಾಸವು ಎಲ್ಲಾ ರೀತಿಯಲ್ಲೂ ಮಹಾತ್ಮ ಗಾಂಧಿ (ಹೊಸ) ಸರಣಿಯ 20 ರೂ. ನೋಟುಗಳಿಗೆ ಹೋಲುತ್ತದೆ. ಹಿಂದೆ ರಿಸರ್ವ್ ಬ್ಯಾಂಕ್ ಹೊರಡಿಸಿದ 20 ರೂ. ಮುಖಬೆಲೆಯ ಎಲ್ಲಾ ನೋಟುಗಳು ಕಾನೂನುಬದ್ಧವಾಗಿ ಚಲಾವಣೆಯಲ್ಲಿ ಮುಂದುವರಿಯುತ್ತವೆ ಎಂದು ತಿಳಿಸಿದೆ.

Exit mobile version