Home ತಾಜಾ ಸುದ್ದಿ ಬರದ ನಾಡಿನ ಭಾಗ್ಯದೇವತೆ ಕೃಷ್ಣೆ

ಬರದ ನಾಡಿನ ಭಾಗ್ಯದೇವತೆ ಕೃಷ್ಣೆ

0

ಬೆಂಗಳೂರು: ಬರದ ನಾಡಿನ ಭಾಗ್ಯದೇವತೆ ಕೃಷ್ಣೆ ಕಣ್ಣಿಗಷ್ಟೇ ಆನಂದ ನೀಡುತ್ತಿಲ್ಲ, ಕೃಷಿ ಕಾಯಕದಲ್ಲಿ ತೊಡಗಿರುವ ಕೃಷಿಕರ ಮೊಗದಲ್ಲೂ ಆನಂದ ಮೂಡಿಸಿದ್ದಾಳೆ ಎಂದು ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.


ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದು ದಟ್ಟ ಕಾನನಗಳ ನಡುವೆ, ಮಲೆನಾಡ ನೆಲದಲ್ಲಿ ಮೂಡಿದ ದೃಶ್ಯ ಇದಲ್ಲ! ಬಬಲೇಶ್ವರ ಮತ ಕ್ಷೇತ್ರದ ತಾಜಪುರದ ಹಳೆ ಸಂಗೂಬಾಯಿ ಹಳ್ಳ ತುಂಬಿ ಹರಿಯುತ್ತಿರುವ ನಯನ ಮನೋಹರ ದೃಶ್ಯವಿದು. ಬರದ ನಾಡಿನ ಭಾಗ್ಯದೇವತೆ ಕೃಷ್ಣೆ ಕಣ್ಣಿಗಷ್ಟೇ ಆನಂದ ನೀಡುತ್ತಿಲ್ಲ, ಕೃಷಿ ಕಾಯಕದಲ್ಲಿ ತೊಡಗಿರುವ ಕೃಷಿಕರ ಮೊಗದಲ್ಲೂ ಆನಂದ ಮೂಡಿಸಿದ್ದಾಳೆ. ಸಮರ್ಪಕವಾಗಿ ಅನುಷ್ಠಾನಗೊಳಿಸುವ ನೀರಾವರಿ ಯೋಜನೆಗಳು ಖಂಡಿತ ಫಲ ನೀಡುತ್ತವೆಂಬುದಕ್ಕೆ ಈ ದೃಶ್ಯ ಸಿರಿ ತಾಜಾ ಉದಾಹರಣೆಯಾಗಿದೆ ಎಂದಿದ್ದಾರೆ.

Exit mobile version