Home News ಬಡ್ತಿಯಲ್ಲೂ ಮೀಸಲಾತಿ ತಂದಿದ್ದು ನಾವು

ಬಡ್ತಿಯಲ್ಲೂ ಮೀಸಲಾತಿ ತಂದಿದ್ದು ನಾವು

ಬೆಂಗಳೂರು: ಈ ಬಾರಿ ಅರ್ಥಪೂರ್ಣವಾದ-ವಾಲ್ಮೀಕಿ ಜಯಂತಿ ಆಚರಣೆ ನಡೆಸೋಣ. ಸಮುದಾಯದ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ವಿಧಾನಸೌಧದ ಸಮ್ಮೇಳನಾ ಸಭಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ “2024ನೇ ಸಾಲಿನ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಕುರಿತ ಪೂರ್ವಭಾವಿ” ಸಭೆಯಲ್ಲಿ ಮಾತನಾಡಿದರು.
SCP/TSP ಕಾಯ್ದೆ ಮೊದಲಿಗೆ ಜಾರಿ ಮಾಡಿದ್ದು ನಮ್ಮ ಕಾಂಗ್ರೆಸ್ ಸರ್ಕಾರ. ಗುತ್ತಿಗೆಯಲ್ಲಿ SC-STಗೆ ಮೀಸಲಾತಿ ಮೊದಲಿಗೆ ತಂದಿದ್ದು ಇಡೀ ದೇಶದಲ್ಲಿ ನಾವು ಮಾತ್ರ.‌
ಬಡ್ತಿಯಲ್ಲೂ ಮೀಸಲಾತಿ ತಂದಿದ್ದು ನಾವು ಮಾತ್ರ ಎಂದು ಕಾಂಗ್ರೆಸ್ ಸರ್ಕಾರದ ಹಲವು ಪ್ರಥಮಗಳನ್ನು ವಿವರಿಸಿದರು.
2013-18ರ ವರೆಗೆ ನಾವು SCP/STP ಅನುದಾನ ನಿರಂತರವಾಗಿ ನಾವು ಹೆಚ್ಚಿಸಿದೆವು. ನಂತರ ಬಂದ ಸರ್ಕಾರ ಕೊಡಲೇ ಇಲ್ಲ. ನಾವು ಮತ್ತೆ ಅಧಿಕಾರಕ್ಕೆ ಬಂದು ಅನುದಾನ ಹೆಚ್ಚಿಸಿದೆವು. ಇದು ನಮ್ಮ ಸರ್ಕಾರದ ಬದ್ಧತೆ ಎಂದರು.

Exit mobile version