Home ತಾಜಾ ಸುದ್ದಿ ಬಡವರ, ದೀನದಲಿತರ ಪರ ಬಜೆಟ್

ಬಡವರ, ದೀನದಲಿತರ ಪರ ಬಜೆಟ್

0

ಹಾವೇರಿ: ಕೇಂದ್ರ ಸರ್ಕಾರ ಬಡವರ ಪರ, ದೀನ ದಲಿತರ ಪರ, ಮಹಿಳೆಯ ಪರವಾಗಿರುವ ಬಜೆಟ್ ಮಂಡನೆ ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿಯಲ್ಲಿ ಕೇಂದ್ರ ಬಜೆಟ್ ಮೇಲೆ ಪ್ರತಿಕ್ರಿಯೆ ನೀಡಿದ ಅವರು, ಇದು ಕಾಂಗ್ರೆಸ್‌ನವರಿಗೆ ಸಹಜವಾಗೇ ನಿರಾಶಾದಾಯಕ ಬಜೆಟ್. ಆದರೆ ಜನರಿಗೆ ಆಶಾದಾಯಕವಾಗಿದೆ. ದೇಶದಲ್ಲಿ ಉದ್ಯೋಗ ಸೃಷ್ಟಿ ಹೆಚ್ಚಾಗಿದೆ. ಹೊಸದಾಗಿ ಯಾವುದೇ ತೆರಿಗೆ ಹಾಕಿಲ್ಲ. ಏಳು ಲಕ್ಷದವರೆಗೆ ತೆರಿಗೆ ರಿಯಾಯಿತಿ ಕೊಟ್ಟಿದ್ದಾರೆ. ಒಂದೂವರೆ ಕೋಟಿ ಲಕ್ಷ ಮೂಲಭೂತ ಸೌಕರ್ಯಕ್ಕೆ ಮೀಸಲಿಟ್ಟಿದ್ದಾರೆ ಎಂದರು.
ಇದು ಪೂರ್ಣ ಪ್ರಮಾಣದ ಬಜೆಟ್ ಅಲ್ಲ. ಜೂನ್‌ನಲ್ಲಿ ಮತ್ತೆ ನರೇಂದ್ರ ಮೋದಿ ಪ್ರಧಾನಿಯಾಗಿ ಉತ್ತಮ ಬಜೆಟ್ ಕೊಡುತ್ತಾರೆ ಎಂದರು.

Exit mobile version