Home ಅಪರಾಧ ಬಟ್ಟೆ ತೊಳೆಯಲು ಹೋದ ಮಹಿಳೆ ನೀರುಪಾಲು

ಬಟ್ಟೆ ತೊಳೆಯಲು ಹೋದ ಮಹಿಳೆ ನೀರುಪಾಲು

0

ಬೆಳಗಾವಿ: ಬಟ್ಟೆ ತೊಳೆಯುವುದಕ್ಕಾಗಿ ಹಿನ್ನೀರಿಗೆ ತೆರಳಿದ ಮಹಿಳೆ ಕಾಲು ಜಾರಿ ಬಿದ್ದು ಸಾವನ್ನಪ್ಪಿದ ಘಟನೆ ಖಾದರವಾಡಿ ಬಳಿ ಹಳ್ಳದಲ್ಲಿ ಬುಧವಾರ ನಡೆದಿದೆ.
ಖಾದರವಾಡಿಯ ನಿವಾಸಿ ಸುನೀತಾ ಸೋಮನಾಥ ಪಾಟೀಲ(೪೦) ಎಂಬುವರೇ ಮೃತ ಮಹಿಳೆ. ಇಂದು ಮುಂಜಾನೆ ಮನೆಯಿಂದ ಬಟ್ಟೆ ತೊಳೆಯುವುದಕ್ಕಾಗಿ ಹಳ್ಳದ ಬಳಿ ತೆರಳಿದ ಇವರು ನೀರಿಗೆ ಬಿದ್ದು ಸಾವನ್ನಪ್ಪಿದ್ದಾರೆ.
ಹಳ್ಳದ ಬಳಿ ದನ ಮೇಯಿಸುತ್ತಿದ್ದ ಹುಡುಗರು ಮೃತದೇಹವನ್ನು ಕಂಡು ತಕ್ಷಣ ಗ್ರಾಮಸ್ಥರಿಗೆ ಸುದ್ದಿ ಮುಟ್ಟಿಸಿದ್ದಾರೆ. ಗ್ರಾಮಿಣ ಪೊಲೀಸರು ಸ್ಥಳಕ್ಕೆ ಬಂದು ಮೃತದೇಹವನ್ನು ಮೇಲಕ್ಕೆತ್ತಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಮೃತ ಸುನೀತಾ ಪತಿ ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧುಗಳಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version