Home ನಮ್ಮ ಜಿಲ್ಲೆ ಬಜೆಟ್ ಮಂಡನೆ ಮುಂದೂಡಲು ಒತ್ತಾಯ

ಬಜೆಟ್ ಮಂಡನೆ ಮುಂದೂಡಲು ಒತ್ತಾಯ

0

ಬೆಂಗಳೂರು: ರಾಜ್ಯ ಬಜೆಟ್ ದಿನದಂದು ವಿಧಾನ ಪರಿಷತ್ ಉಪಚುನಾವಣೆ ನಡೆಯುವುದು ಸರಿಯಲ್ಲ. ಹಾಗಾಗಿ ಬಜೆಟ್ ಮಂಡನೆಯ ದಿನವನ್ನು ಮುಂದೂಡುವಂತೆ ರಾಜ್ಯ ಚುನಾವಣಾ ಆಯೋಗವನ್ನು ರಾಜ್ಯ ಬಿಜೆಪಿ ನಿಯೋಗ ಮನವಿ ಮಾಡಿದೆ. ಮಾಜಿ ಡಿಸಿಎಂ ಡಾ. ಸಿ ಎನ್ ಅಶ್ವತ್ಥನಾರಾಯಣ ನೇತೃತ್ವದ ಬಿಜೆಪಿ ನಿಯೋಗವು ಇಂದು ರಾಜ್ಯ ಚುನಾವಣಾ ಆಯೋಗವನ್ನು ಭೇಟಿ ಮಾಡಿ ಚುನಾವಣಾ ಆಯೋಗವು ಫೆಬ್ರವರಿ 16ರಂದು ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ ನಡೆಸುವುದಾಗಿ ಘೋಷಣೆ ಮಾಡಿದೆ, ಇದೇ ದಿನ ರಾಜ್ಯ ಸರ್ಕಾರದ ಬಜೆಟ್ ಕೂಡ ಮಂಡಿಸಲಿದೆ. ನಿಯಮಗಳ ಪ್ರಕಾರ ಚುನಾವಣೆ ನಡೆಯುವ ದಿನ ಬಜೆಟ್ ಮಂಡಿಸುವಂತಿಲ್ಲ, ಹೀಗಾಗಿ ಬಜೆಟ್ ಮಂಡನೆಯ ದಿನವನ್ನು ಮುಂದೂಡುವಂತೆ ಚುನಾವಣಾ ಆಯೋಗದ ಗಮನಕ್ಕೆ ತರಲಾಗಿದೆ.

Exit mobile version