Home ಅಪರಾಧ ಫೈಯಾಜ್‌ನ ವಶಕ್ಕೆ ಪಡೆದ ಸಿಐಡಿ

ಫೈಯಾಜ್‌ನ ವಶಕ್ಕೆ ಪಡೆದ ಸಿಐಡಿ

0

ಧಾರವಾಡ: ನ್ಯಾಯಾಲಯದ ಆದೇಶದಂತೆ ಸಿಐಡಿ ಅಧಿಕಾರಿಗಳು ನೇಹಾ ಕೊಲೆ ಆರೋಪಿ ಫೈಯಾಜ್‌ನನ್ನು ಕೇಂದ್ರ ಕಾರಾಗೃಹದಿಂದ ವಶಕ್ಕೆ ಪಡೆದರು.
ಮುಂಜಾನೆಯೇ ಕೇಂದ್ರ ಕಾರಾಗೃಹಕ್ಕೆ ಆಗಮಿಸಿದ ಸಿಐಡಿ ಅಧಿಕಾರಿಗಳು ಕೇಂದ್ರ ಕಾರಾಗೃಹಕ್ಕೆ ವೈದ್ಯರನ್ನು ಕರೆಯಿಸಿದರು. ಬಳಿಕ ಆತನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದರು.
ನಂತರ ಐದು ವಾಹನಗಳಲ್ಲಿ ಸೂಕ್ತ ಬಂದೋಬಸ್ತ್ ಮಧ್ಯೆ ಫೈಯಾಜ್‌ನನ್ನು ಸಿಐಡಿ ಅಧಿಕಾರಿಗಳು ವಿಚಾರಣೆಗೆ ಕರೆದುಕೊಂಡು ತೆರಳಿದರು.

Exit mobile version