Home ನಮ್ಮ ಜಿಲ್ಲೆ ಧಾರವಾಡ ಫಯಾಜ್ ಪರ ಸ್ಟೇಟಸ್ : ಯುವಕರನ್ನು ಪೊಲೀಸರಿಗೆ ಒಪ್ಪಿಸಿದ ಹಿಂದೂ ಕಾರ್ಯಕರ್ತರು

ಫಯಾಜ್ ಪರ ಸ್ಟೇಟಸ್ : ಯುವಕರನ್ನು ಪೊಲೀಸರಿಗೆ ಒಪ್ಪಿಸಿದ ಹಿಂದೂ ಕಾರ್ಯಕರ್ತರು

0

ಧಾರವಾಡ: ಹುಬ್ಬಳ್ಳಿ ಬಿವಿಬಿ ಕಾಲೇಜಿನಲ್ಲಿ ನಡೆದ ಹತ್ಯೆ ಪ್ರಕರಣ ಸಮರ್ಥನೆ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಸ್ಟೇಟಸ್ ಹಾಕಿಕೊಂಡ ಯುವಕರನ್ನು ಬಜರಂಗ ದಳದ ಕಾರ್ಯಕರ್ತರು ವಿದ್ಯಾಗಿರಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ನೇಹಾ ಕೊಲೆ ಮಾಡಿದ ಫಯಾಜ್ ತನ್ನ ಪ್ರೀತಿಗಾಗಿ ಮಾಡಿದ್ದಾನೆ.‌ಅದನ್ನು ಲವ್ ಜಿಹಾದ ಅನ್ನಬೇಡಿ. ಹಾಗಾದರೆ ಇತ್ತೀಚೆಗೆ ರುಕ್ಸಾನಾ ಎಂಬ ಯುವತಿಯೊಂದಿಗೆ ಅನ್ಯಾಯವಾಗಿದೆ. ಅದು ಭಗವಾ ಜಿಹಾದ್‌…ನಾ ಎಂದು ಪ್ರಶ್ನಿಸಿ ಇನ್‌ಸ್ಟಾಗ್ರಾಂ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣದಲ್ಲಿ ಸ್ಟೇಟಸ್ ಇರಿಸಿಕೊಂಡಿದ್ದರು.
ಇದನ್ನು ಗಮನಿಸಿದ ಹಿಂದೂಪರ ಸಂಘಟನೆ ಕಾರ್ಯಕರ್ತರು ಅವರಿಗೆ ಕರೆ ಮಾಡಿ ಪ್ರಶ್ನಿಸಿದರೆ, ನಮ್ಮ‌ ಮನಸ್ಸು ನಾವು ಇಟ್ಟುಕೊಳ್ಳುತ್ತೇವೆ. ನೀವೇನು ಮಾಡುತ್ತೀರಿ ಎಂದು ಪ್ರಶ್ನಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಹಿಂದೂಪರ ಸಂಘಟನೆ ಕಾರ್ಯಕರ್ತರು ಮುಸ್ಲಿಂ ಯುವಕರನ್ನು ಹಿಡಿದು ಠಾಣೆಗೆ ಒಪ್ಪಿಸಿದ್ದಾರೆ. ಅಲ್ಲದೇ ಪರಾರಿಯಾಗಿರುವ ಇನ್ನೂ ಕೆಲವರನ್ನು ಬಂಧಿಸುವಂತೆ ಆಗ್ರಹಿಸಿ ವಿದ್ಯಾಗಿರಿ ಠಾಣೆ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.

Exit mobile version