ಕೊಪ್ಪಳ: ೨೦೨೪-೨೫ನೇ ಪ್ರವೇಶಾತಿ ಶುಲ್ಕ ಕಡಿಮೆ ಮಾಡಬೇಕು ಎಂದು ಒತ್ತಾಯಿಸಿ ನಗರದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಭಾರತ ರತ್ನ ಶ್ರೀಅಟಲ್ ಬಿಹಾರಿ ವಾಜಪೇಯಿ ಕಾನೂನು ಕಾಲೇಜು ಮುಂದೆ ಶನಿವಾರ ಕಾನೂನು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಪ್ರವೇಶಾತಿ ಶುಲ್ಕ ಕಡಿಮೆ ಮಾಡಬೇಕೆಂದು ವಿದ್ಯಾರ್ಥಿಗಳು ಕಾನೂನು ಕಾಲೇಜಿನ ಪ್ರಾಚಾರ್ಯ ಉಷಾದೇವಿಗೆ ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು. ವಿದ್ಯಾರ್ಥಿಗಳು ವಿರುಪಾಕ್ಷಪ್ಪ, ನಿಂಗಪ್ಪ ಮಜ್ಜಿಗಿ, ನಂದಿನಿ, ಮಹಾಲಕ್ಷ್ಮಿ, ಸುಧಾ, ಪ್ರಗತಿ, ಉಮಾದೇವಿ, ಕಿರಣಕುಮಾರ, ಚನ್ನಬಸವ, ಮಂಜುನಾಥ ಕುಂಬಾರ, ರವಿಕುಮಾರ, ಸರ್ವಜ್ಞಮೂರ್ತಿ, ರವಿ ಸೇರಿದಂತೆ ಹಲವು ವಿದ್ಯಾರ್ಥಿಗಳು ಇದ್ದರು.