Home ತಾಜಾ ಸುದ್ದಿ ಪ್ರಕರಣ ದಾಖಲಿಸುತ್ತೇನೆ

ಪ್ರಕರಣ ದಾಖಲಿಸುತ್ತೇನೆ

0

ಹುಬ್ಬಳ್ಳಿ: ನವಲೂರು ರಸ್ತೆ ಒಂದು ತಿಂಗಳಲ್ಲಿ ಪೂರ್ಣ ಮಾಡದಿದ್ದರೆ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಶಾಸಕರಾದ ಅರವಿಂದ ಬೆಲ್ಲದ ಹೇಳಿದರು.
ಧಾರವಾಡ ಹೊಸ ಬಸ್ ನಿಲ್ದಾಣದಿಂದ ಕಲಾಭವನದವರೆಗಿನ ರಸ್ತೆ ಪೂರ್ಣವಾಗದಿದ್ದರೂ ಪೂರ್ಣವಾಗಿದೆ ಎಂದು ಪತ್ರ ನೀಡಲಾಗಿದೆ. ನವಲೂರು ರಸ್ತೆ ಕಾಮಗಾರಿ ಪೂರ್ಣವಾಗಿಲ್ಲ. ರಸ್ತೆ ಅಭಿವೃದ್ಧಿ ಮಾಡಿಲ್ಲ. ಇದು ಎಂಐ(ಸಣ್ಣ ನೀರಾವರಿ ಇಲಾಖೆಗೆ) ಬರುತ್ತದೆ ಎಂದು ಬರೆದಿಟ್ಟು ಕುಳಿತುಕೊಂಡಿದ್ದಾರೆ. ಇದು ಒಂದು ತಿಂಗಳಲ್ಲಿ ಪೂರ್ಣವಾಗದಿದ್ದರೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಪ್ರಕರಣ ದಾಖಲು ಮಾಡುತ್ತೇನೆ ಎಂದು ಬೆಲ್ಲದ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

Exit mobile version