Home ತಾಜಾ ಸುದ್ದಿ ಪೂರ್ವ ತಯಾರಿ ಇಲ್ದೇ ಮಾಡಿದ್ದಾರೆ ಜಾತಿ ಗಣತಿ

ಪೂರ್ವ ತಯಾರಿ ಇಲ್ದೇ ಮಾಡಿದ್ದಾರೆ ಜಾತಿ ಗಣತಿ

0

– ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪ

ಹುಬ್ಬಳ್ಳಿ: ಯಾವುದೇ ರೀತಿಯ ಪೂರ್ವ ತಯಾರಿ ಇಲ್ಲದೆ ಜಾತಿ ಗಣತಿ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದ್ದಾರೆ.

ಜಯಪ್ರಕಾಶ್ ಹೆಗ್ಡೆ ಅವರು ಸರ್ಕಾರಕ್ಕೆ ಸಲ್ಲಿಸಿದ ಜಾತಿ ಗಣತಿ ವರದಿಗೆ ಹೀಗೆ ಸಚಿವ ಜೋಶಿ ಪ್ರತಿಕ್ರಿಯಿಸಿದರು.

ವರದಿ ವಾಸ್ತವಿಕವಾಗಿಲ್ಲ ಎಂದು ನಮಗಿಂತ ಮೊದಲು ಕಾಂಗ್ರೆಸ್ ಪಕ್ಷದವರೇ ಹೇಳುತ್ತಿದ್ದಾರೆ. ಯಾವುದೇ ರೀತಿ ಆದಂಥ ಪೂರ್ವ ತಯಾರಿ ಇಲ್ಲದೇ ಜಾತಿ ಗಣತಿ ಮಾಡಿದ್ದಾರೆ ಎಂದು ಹೇಳಿದರು.

ಸರಿಯಿಲ್ಲ ಎಂದು ಕಾಂಗ್ರೆಸ್ ನವರೇ ಒಪ್ಪಿಕೊಳ್ಳುತ್ತಿದ್ದಾರೆ: ಈ ಜಾತಿ ಗಣತಿ ವರದಿಯಲ್ಲಿ ಸರಿಯಾದ ಮಾಹಿತಿಯೇ ಇಲ್ಲ ಎಂಬುದನ್ನು ಕಾಂಗ್ರೆಸ್ ನವರೇ ಒಪ್ಪಿಕೊಳ್ಳುತ್ತಿದ್ದಾರೆ. ಹೀಗಿರುವಾಗ ಜಯಪ್ರಕಾಶ ಹೆಗ್ಡೆ ಅವರ ವರದಿ ಬಗ್ಗೆ ತಮ್ಮ ನಿಲುವೇನು? ಎಂಬುದನ್ನು ಕಾಂಗ್ರೆಸ್ ಸ್ಪಷ್ಟಪಡಿಸಲಿ. ಆಮೇಲೆ ಬಿಜೆಪಿ ತನ್ನ ನಿಲುವನ್ನು ತಿಳಿಸಲಿದೆ ಎಂದು ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.

Exit mobile version