ಉಗ್ರ ದಾಳಿಗೆ ಸಂಬಂಧಿಸಿ ನಡೆದ ಹತ್ತು ಹಲವಾರು ಬೆಳವಣಿಗೆಗಳ ಮಧ್ಯೆ ಮಗದೊಂದು ಮಹತ್ವದ ಸೂಚನೆಯನ್ನು ಕೇಂದ್ರ ಸರ್ಕಾರ ಕೊಟ್ಟಿದ್ದು, ಪಾಕಿಸ್ತಾನದಲ್ಲಿರುವ ಎಲ್ಲಾ ಭಾರತೀಯರು ತಕ್ಷಣವೇ ದೇಶಕ್ಕೆ ವಾಪಸ್ ಬನ್ನಿ ಎಂದು ಹೇಳಿದೆ. ಜತೆಗೆ ಯಾರಾದರೂ ಪಾಕಿಸ್ತಾನಕ್ಕೆ ಹೋಗುವ ಯೋಜನೆ ಹಾಕಿಕೊಂಡಿದ್ದರೆ ತಕ್ಷಣವೇ ಅದನ್ನು ಕೈಬಿಡುವಂತೆ ಅವರಿಗೂ ಭಾರತ ಸರ್ಕಾರ ಸೂಚನೆ ನೀಡಿದೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಭಾರತೀಯ ವಿಮಾನಗಳು ತನ್ನ ವಾಯುಪ್ರದೇಶದ ಮೇಲೆ ಹಾರಿಹೋಗದಂತೆ ಪಾಕಿಸ್ತಾನ ನಿರ್ಬಂಧ ವಿಧಿಸಿದೆ. ಜತೆಗೆ ವಾಘಾ ಗಡಿಯನ್ನೂ ಬಂದ್ ಮಾಡಿ ಶಹಬಾಜ್ ಶರೀಫ್ ನೇತೃತ್ವದ ಸರ್ಕಾರ ಆದೇಶ ಹೊರಡಿಸಿದೆ.