Home News ಪಾಕಿಸ್ತಾನ ನಡೆ ಹೇಗೆ ಒಪ್ಪಿಕೊಳ್ಳಲು ಸಾಧ್ಯ?

ಪಾಕಿಸ್ತಾನ ನಡೆ ಹೇಗೆ ಒಪ್ಪಿಕೊಳ್ಳಲು ಸಾಧ್ಯ?

ಸಿರಿಗೆರೆ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಪ್ರಶ್ನೆ
ದಾವಣಗೆರೆ: ಭಾರತ ಭಯೋತ್ಪಾದಕರ ನಲೆಯ ಮೇಲೆ ದಾಳಿ ಮಾಡಿದಾಗ ಪಾಕಿಸ್ತಾನ ಕೃತಜ್ಞತೆ ತೋರಬೇಕಿತ್ತು. ಆದರೆ, ಇದಕ್ಕೆ ವಿರುದ್ಧವಾಗಿ ಪಾಕಿಸ್ತಾನ ನಡೆದುಕೊಳ್ಳುತ್ತಿದೆ. ಇದನ್ನು ಒಪ್ಪಲು ಹೇಗೆ ಸಾಧ್ಯ ಎಂದು ಸಿರಿಗೆರೆ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.
ತಾಲೂಕಿನ ನಾಗನೂರು ಗ್ರಾಮದಲ್ಲಿ ಉಮಾ ಮಹೇಶ್ವರ ಸೇವಾ ಟ್ರಸ್ಟ್ ವತಿಯಿಂದ ಭಾನುವಾರ ಆಯೋಜಿಸಿದ್ದ ಗಣೇಶ ದೇವಸ್ಥಾನ, ಗೌರಸಮುದ್ರ ಮಾರಮ್ಮ ದೇಗುಲದ ಮೂರ್ತಿ ಪ್ರತಿಷ್ಠಾಪನೆ, ಕಳಸಾರೋಹಣ ಮತ್ತು ದೇಗುಲ ಉದ್ಘಾಟನಾ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.
ಕಾಶ್ಮೀರದಲ್ಲಿ ನರಮೇದ ನಡೆಯುತ್ತಿದೆ. ಯುದ್ಧ ಪಾಕಿಸ್ತಾನ ವಿರುದ್ಧ ಮಾತ್ರವಲ್ಲ, ಭಯೋತ್ಪಾದಕರ ವಿರುದ್ಧ ನಡೆಯುತ್ತಿರುವ ಯುದ್ಧ ಇದು. ಸರ್ಕಾರ ಜನ ಹಿತ ಕಾಪಾಡಬೇಕು. ಆದರೆ, ನೆರೆಯ ರಾಷ್ಟ್ರದಲ್ಲಿ ಏನಾಗುತ್ತದೆ? ಎರಡು ದೇಶದ ರಾಜಕಾರಣಿಗಳ ಬಗ್ಗೆ ಜನರಲ್ಲಿ ದ್ವೇಷ ಇದೆ. ಜನಸಾಮಾನ್ಯರು ಅವರ ಪಾಡಿಗೆ ಅವರು ಇದ್ದಾರೆ. ಆದರೆ, ರಾಜಕೀಯ ಹಿತಸಕ್ತಿಗೆ ಇಂತಹ ಪರಿಸ್ಥಿತಿ ಸೃಷ್ಟಿ ಮಾಡಿದೆ ಎಂದರು.
ಯಾವ ಧರ್ಮ ಕೂಡ ಹಿಂಸೆ ಪ್ರಚೋದನೆ ನೀಡುವುದಿಲ್ಲ. ಜೀವನದ ಮೌಲ್ಯಗಳು ಎಲ್ಲ ಧರ್ಮದಲ್ಲಿ ಇವೆ. ಆದರೂ ಹಿಂಸೆ ಮಾಡುತ್ತಿರುವುದು ವಿಪರ್ಯಾಸ. ದ್ವೇಷ ಬೆಳೆಯುತ್ತಿದೆ. ಧರ್ಮ ಬುದ್ಧಿ ಮರೆಯಾಗುತ್ತಿದೆ. ವಿವೇಕ ಜಾಗೃತಿ ಆಗಬೇಕು. ಮಸೀದಿ, ಚರ್ಚ್ ಹಾಗೂ ದೇಗುಲದಲ್ಲಿ ಇರುವುದು ದೇವರೆ. ಅವರವರ ಭಕ್ತಿ, ಭಾವಕ್ಕೆ ತಕ್ಕಂತೆ ಇರುವ ದೇವರ ನೆಲೆಯನ್ನು ಪ್ರತಿಯೊಬ್ಬರೂ ಗೌರವಿಸಬೇಕು ಎಂದರು.
ಕಾಶ್ಮೀರದಲ್ಲಿ 26 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದು ದುರಂತವಲ್ಲವೇ. ಯುದ್ಧದಲ್ಲಿ ಪ್ರಾಣ ಕಳೆದುಕೊಂಡ ಭಾರತೀಯರು ಹಾಗೂ ಪಾಕಿಸ್ತಾನದ ಜನಸಾಮಾನ್ಯರ ಬಗ್ಗೆ ಕರುಣೆ ತೋರುವುದು ಮಾನವೀಯತೆ. ಆದರೆ, ಉಗ್ರರ ಬಗ್ಗೆ ಅಷ್ಟೇ ಕಠಿಣ ಹೃದಯಿಗಳಾಗಬೇಕು. ಭಯೋತ್ಪಾದಕರನ್ನು ದೇವರು ಕೂಡ ಕ್ಷಮಿಸಲಾರ ಎಂದು ತಿಳಿಸಿದರು.

Exit mobile version