ಬೆಂಗಳೂರು: ರಾಜೀವ್ ಗಾಂಧಿ ಅವರ ಮಾರ್ಗದರ್ಶನದ ಆಧಾರದ ಮೇಲೆ ಉತ್ತಮ ನಾಯಕನನ್ನು ಗುರುತಿಸಲು ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ಹೇಳಿದ್ದಾರೆ.
ನಗರದ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಅವರು ಪಂಚಾಯಿತಿಯಿಂದ ಪಾರ್ಲಿಮೆಂಟ್‌ವರೆಗೂ ನಾಯಕರಾಗಬೇಕು. ಆ ನಾಯಕರುಗಳಿಗೆ ಜಾವಾಬ್ದಾರಿ ಇರಬೇಕು ಆ ದೃಷ್ಟಿಯಿಂದ ಬ್ಲಾಕ್ ಮಟ್ಟದಲ್ಲಿ, ತಾಲೂಕು ಮಟ್ಟದಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ಯುವಕರು ನಾಯಕನ ಗುಣಗಳನ್ನು ಹೊಂದಿ ಚುನಾವಣಾ ಕಣದಿಂದ ಆಯ್ಕೆಯಾಗಿ ನಾಯಕರಾಗಿ ಹೊರಹೊಮ್ಮಬೇಕು.
ನಮ್ಮ ಯೂತ್ ಕಾಂಗ್ರೆಸ್‌ನಲ್ಲಿ ನಾಯಕರನ್ನು ತಯಾರು ಮಾಡಬೇಕೆಂಬ ಉದ್ದೇಶದಿಂದ, ಚುನಾವಣಾ ಆಯೋಗದ ರೀತಿಯಲ್ಲಿ ಪಕ್ಷದಲ್ಲಿ ಚುನಾವಣೆಗಳನ್ನು ನಡೆಸಲು ಸಿದ್ದತೆಯನ್ನು ಮಾಡಿಕೊಂಡಿದ್ದೇವೆ. ಉತ್ತಮ ನಾಯಕರಿಗಾಗಿ ಆಂತರಿಕ ಚುನಾವಣೆಯನ್ನು ಪಕ್ಷದ ಒಳಗಡೆ ಮಾಡಲು ಹೊರಟಿದ್ದೇವೆ. ಆಗಸ್ಟ್ ತಿಂಗಳಿಂದ ನೋಂದಣಿ ಪ್ರಾರಂಭವಾಗುತ್ತಿದೆ. ಇದರ ಸದಸ್ಯತ್ವವನ್ನು ಪಡೆಯಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಒಟ್ಟು 5 ಜಿಲ್ಲೆಗಳಲ್ಲಿ ಮಹಿಳೆಯರಿಗೆ, ಎಸ್‌ಸಿ ಎಸ್‌ಟಿ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲಾ ವರ್ಗಗಳಿಗೂ ಮೀಸಲಾತಿಯನ್ನು ಒದಗಿಸಲಾಗಿದೆ. ಆಗಸ್ಟ್ 2 ರಂದು ನೋಂದಣಿ ಶುರುವಾಗಲಿದ್ದು, ಯುವಕರು ಇದರ ಸದುಪಯೋಗ ಪಡಿಸಿಕೊಳ್ಳಿ ಉತ್ತಮ ನಾಯಕರಾಗಿ ಹೊರಹೊಮ್ಮಿ ಎಂದರು.