Home ತಾಜಾ ಸುದ್ದಿ ಪಂಚಮಸಾಲಿ ಟ್ರಸ್ಟ್‌ಗೆ ಕಾಶಪ್ಪನವರ ನೂತನ ಅಧ್ಯಕ್ಷ

ಪಂಚಮಸಾಲಿ ಟ್ರಸ್ಟ್‌ಗೆ ಕಾಶಪ್ಪನವರ ನೂತನ ಅಧ್ಯಕ್ಷ

0

ಹುಬ್ಬಳ್ಳಿ: ಯತ್ನಾಳ ಉಚ್ಚಾಟನೆ ಹಾಗೂ ಶ್ರೀಗಳ ಹೇಳಿಕೆ, ಪ್ರತಿರೋಧ ಹಿನ್ನೆಲೆಯಲ್ಲಿ ಪಂಚಮಸಾಲಿ ಸಮಾಜದಲ್ಲಿ ಗೊಂದಲ ಉಂಟಾದ ನಡುವೆಯೇ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ಟ್ರಸ್ಟಿನ ಸರ್ವ ಸದಸ್ಯರುಗಳ ಸಭೆ ಗುರುವಾರ ಇಲ್ಲಿ ನಡೆದು ನೂತನ ಅಧ್ಯಕ್ಷರನ್ನಾಗಿ ಶಾಸಕ ವಿಜಯಾನಂದ ಕಾಶಪ್ಪನವರ ಅವರನ್ನು ಆಯ್ಕೆ ಮಾಡಲಾಯಿತು.
ನೂತನ ಪದಾಧಿಕಾರಿಗಳನ್ನು ಸಹ ಇದೇ ಸಂದರ್ಭದಲ್ಲಿ ಆಯ್ಕೆ ಮಾಡಲಾಗಿದ್ದು ಪ್ರಧಾನ ಕಾರ್ಯದರ್ಶಿಯಾಗಿ ನೀಲಕಂಠ ಅಸೂಟಿ, ಕಾರ್ಯಧ್ಯಕ್ಷರಾಗಿ ರಾಜಶೇಖರ ಮೆಣಸಿನಕಾಯಿ ಹಾಗೂ ಗೌರವ ಅಧ್ಯಕ್ಷರನ್ನಾಗಿ ಪ್ರಬಣ್ಣ ಹುಣಸಿಕಟ್ಟಿ ನಿಯುಕ್ತಿಗೊಂಡರು.
ಈ ಹಿಂದೆ ನೇಮಕಗೊಳಿಸಿದ ರಾಷ್ಟ್ರೀಯ ಘಟಕ, ರಾಜ್ಯ ಯುವ ಘಟಕ, ಮಹಿಳಾ ಘಟಕ ಸೇರಿದಂತೆ ಜಿಲ್ಲಾ ತಾಲೂಕ ಘಟಕಗಳ ಅಧ್ಯಕ್ಷ ಪದಾಧಿಕಾರಿಗಳನ್ನು ತಕ್ಷಣ ಜಾರಿಗೆ ಬರುವಂತೆ ವಿಸರ್ಜಿಸಲಾಯಿತು.
ಅಧ್ಯಕ್ಷತೆಯನ್ನು ಹಿರಿಯ ಧರ್ಮದರ್ಶಿ ಎಸ್.ಡಿ. ಕೊಳ್ಳಿ ವಹಿಸಿದ್ದರು. ಇದೇ ಸಂದರ್ಭದಲ್ಲಿ ಶ್ರೀ ಪೀಠದ ಅಡಿಗಲ್ಲು ಸಮಾರಂಭ, ಸಮಾಜದ ಸಂಘಟನೆ ಬಲಪಡಿಸುವುದು ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚಿಸಲಾಯಿತು.
ಇದಕ್ಕೂ ಮೊದಲು ರಾಷ್ಟ್ರೀಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಪ್ರಬಣ್ಣ ಹುಣಸಿಕಟ್ಟಿ ರಾಜೀನಾಮೆ ಸಲ್ಲಿಸಿದರು.
ಟ್ರಸ್ಟಿನ ಕಾರ್ಯದರ್ಶಿ ನಂದಕುಮಾರ್ ಪಾಟೀಲ್ ಪ್ರಾಸ್ತವಿಕವಾಗಿ ಮಾತನಾಡಿದರು. ಸಭೆಯಲ್ಲಿ ಧರ್ಮದರ್ಶಿಗಳಾದ ಶೇಖರಪ್ಪ ಬಾದವಾಡಗಿ, ಗಂಗಣ್ಣ ಬಾಗೇವಾಡಿ, ಕಲ್ಲಪ್ಪ ಎಲಿವಾಳ, ಕುಮಾರ ಕುಂದನಹಳ್ಳಿ, ಶಿವಾನಂದ ಕಂಠಿ, ಚಂದ್ರಶೇಖರ್ ಹುಣಸಿಕಟ್ಟಿ, ಮುತ್ತಣ್ಣ ಬಾಡಿನ, ಭರತ್ ಅಸೂಟಿ, ಎಂ.ಎಸ್.ಪಾಟೀಲ್, ಎಂ.ಎಸ್. ಮಲ್ಲಾಪುರ, ಲಕ್ಷ್ಮಣ ನರಸಾಪುರ್, ಮಹದೇವಪ್ಪ ದಾಟನಾಳ ಸೇರಿದಂತೆ ಮುಂತಾದವರು ಇದ್ದರು.

Exit mobile version